More

    50 ದಿನ ಪೂರೈಸಿತು ಕೆಜಿಎಫ್​​ -2: ಈವರೆಗೆ ಗಳಿಸಿದ್ದೆಷ್ಟು?

    ಬೆಂಗಳೂರು: ಭಾರೀ ಯಶಸ್ಸು ಗಳಿಸಿರುವ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​ 2 ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

    ಭಾರತದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ಕೆಜಿಎಫ್​​-2 ಥಿಯೇಟರ್​​ಗಳಲ್ಲಿ ಐವತ್ತು ದಿನ ಪೂರೈಸಿದರೂ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ಗುರಿತಿಸುವಂತೆ ಮಾಡಿರುವ ಈ ಚಿತ್ರ ಗಳಿಕೆಯಲ್ಲೂ ಸಹ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

    ಗಳಿಕೆಯಲ್ಲಿ ಸಾವಿರ ಕೋಟಿ ರೂ. ದಾಟಿದ ಮೊದಲ ಸಿನಿಮಾ ಇದಾಗಿದೆ. ಏ.14ರಂದು ವಿಶ್ವದಾದ್ಯಂತ ಕೆಜಿಎಫ್​​ 2 ಸಿನಿಮಾ ಬಿಡುಗಡೆಗೊಂಡಿತ್ತು. ಅಲ್ಲಿಂದ ಚಿತ್ರರಮಂದಿರಗಳಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು, ಭಾರೀ ಗಳಿಕೆ ಕಂಡಿದೆ. ಹಿಂದಿ ಆವೃತ್ತಿಯೊಂದರಲ್ಲೇ 500 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿತ್ತು. ಇನ್ನು ಬಾಹುಬಲಿ ಸಿನಿಮಾವನ್ನೇ ಪೈಪೋಟಿ ನೀಡುತ್ತಿದೆ.

    ಈ ಚಿತ್ರ ಬಿಡುಗಡೆಯಾದಾಗಿನಿಂದ ಬಿರುಗಾಳಿ ಎಬ್ಬಿಸುತ್ತಿದ್ದು,  48ನೇ ದಿನದವರೆಗೂ 1 ಕೋಟಿ ರೂ.ವರರೆಗೆ ಗಳಿಕೆ ಕಂಡಿದೆ. 50 ನೇ ದಿನದಲ್ಲಿ 50 ಲಕ್ಷ ರೂ. ಗಳಿಸುವ ಮೂಲಕ ಈವರೆಗೆ 1239.97 ಕೋಟಿ ರೂ. ಗಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆ ಕನ್ನಡ ಚಿತ್ರವೊಂದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಕನ್ನಡಿಗರ ಹೆಮ್ಮೆಯಾಗಿದೆ. (ಏಜೆನ್ಸೀಸ್​)

    ಮದ್ಯ ಪ್ರಿಯರಿಗೆ ಸಿಹಿಸುದ್ದಿ: ಆರ್ಡರ್​ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟದ ಬ್ರಾಂಡ್​​!

    ಅಪರಿಚಿತರಿಗೆ ಎಟಿಎಂ ಕಾರ್ಡ್​​ ಕೊಡುವ ಮುನ್ನ ಎಚ್ಚರ: ಮೈಸೂರಿನಲ್ಲಿ ಎಟಿಎಂ ಚೋರನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts