More

    ಕಸ ಗುಡಿಸುತ್ತಿದ್ದ ಪಂಚಾಯಿತಿ ಕಚೇರಿಯಲ್ಲೇ ಅಧ್ಯಕ್ಷೆ ಗಾದಿಗೇರಿದ ಮಹಿಳೆ..!

    ಕೊಚ್ಚಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಸ ಗುಡಿಸಿ, ಧೂಳು ಹಿಡಿದ ಚೇರನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಇಂದು ಅದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸ್ಥಾನಕ್ಕೇರುವ ಮೂಲಕ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

    ಎ. ಆನಂದವಳ್ಳಿ (40) ಎಂಬಾಕೆ ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಬ್ಲಾಕ್​ ಪಂಚಾಯಿತಿ ಅಧ್ಯಕ್ಷೆ ಸ್ಥಾನವನ್ನು ಬುಧವಾರ ಅಲಂಕರಿಸಿದರು. ಆನಂದವಳ್ಳಿ ಕಮ್ಯುನಿಷ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾರ್ಕ್ಸಿಸ್ಟ್​)ದಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ದಲಿತ ಮಹಿಳೆಯಾಗಿರುವ ಆನಂದವಳ್ಳಿ ಸುಮಾರು 10 ವರ್ಷದಿಂದ ಪಂಚಾಯಿತಿ ಕಚೇರಿಯಲ್ಲಿ ಸ್ವೀಪರ್​ ಆಗಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿದ್ದರು. ಇದೀಗ ಅದೃಷ್ಟ ಕುಲಾಯಿಸಿದ್ದು, ಎಲ್ಲರನ್ನು ಬೆರಗಗೊಳಿಸಿದ್ದಾರೆ.

    ಇದನ್ನೂ ಓದಿ: ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

    ಇಂತಹ ವಿಶೇಷತೆಗಳು ನಮ್ಮ ಪಾರ್ಟಿಯಲ್ಲಿ ಮಾತ್ರ ನಡೆಯುತ್ತವೆ. ಈ ಋಣವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಕಣ್ಣೀರಿಡುತ್ತಲೇ ಆನಂದವಳ್ಳಿ ಅಧ್ಯಕ್ಷೆ ಸ್ಥಾನವನ್ನೇರಿದರು.

    ಮಾರ್ಕ್ಸಿಸ್ಟ್​ ಬೆಂಬಲಿತ ಕುಟುಂಬದಿಂದ ಬಂದಿರುವ ಆನಂದವಳ್ಳಿ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಆಕೆಯ ಪತಿ ಪೇಂಟರ್​ ಕೆಲಸ ಮಾಡುತ್ತಿದ್ದು, ಪತಿಯೂ ಸಹ ಸಿಪಿಐ (ಎಂ) ನಲ್ಲಿ ತೊಡಗಿಕೊಂಡಿದ್ದಾರೆ. 2011ರಲ್ಲಿ ಆನಂದವಳ್ಳಿ ಗ್ರಾಮ ಪಂಚಾಯಿತಿಗೆ ತಿಂಗಳಿಗೆ 2000 ರೂ.ಗೆ ಸ್ವೀಪರ್​ ಕೆಲಸಕ್ಕೆ ಸೇರಿದಳು. ಇದೀಗ ಕೆಲಸಕ್ಕೆ ರಾಜೀನಾಮೆ ನೀಡಿರುವ ಆನಂದವಳ್ಳಿ ಅಧ್ಯಕ್ಷೆ ಗಾದಿಯನ್ನು ಏರಿದ್ದಾಳೆ.

    ಇದನ್ನೂ ಓದಿ: ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

    ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 654 ಮತಗಳಲ್ಲಿ ಥಲವೂರ್​ ವಿಭಾಗದಲ್ಲಿ ಗೆಲವು ಸಾಧಿಸಿದ್ದಾರೆ. ಸದ್ಯ ನನಗೀಗ ಭಾರಿ ಜವಬ್ದಾರಿ ಇದೆ. ನನ್ನ ಬ್ಲಾಕ್​ನಲ್ಲಿರುವ ಜನರ ಕಲ್ಯಾಣಕ್ಕೆ ಕಷ್ಟಪಟ್ಟು ದುಡಿಯುತ್ತೇನೆಂದು ಆನಂದವಳ್ಳಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಅತ್ತೆ ಮಾವ ವ್ಯಂಗ್ಯವಾಡಿದರೆ ಅದು ತಪ್ಪಲ್ಲ! ಗಂಡನ ಮನೆಯವರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ!

    ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ವಿಡಿಯೋ ವೈರಲ್​: 26 ಮಂದಿ ಬಂಧನ

    ಜನವರಿಯಲ್ಲಿ ಬ್ಯಾಂಕ್​ಗಳಿಗೆ ಇರುವ ರಜೆ ಎಷ್ಟು? 1ರಂದು ರಜೆ ಇದ್ಯಾ? ಇಲ್ಲಿದೆ ನೋಡಿ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts