More

    ಜನವರಿಯಲ್ಲಿ ಬ್ಯಾಂಕ್​ಗಳಿಗೆ ಇರುವ ರಜೆ ಎಷ್ಟು? 1ರಂದು ರಜೆ ಇದ್ಯಾ? ಇಲ್ಲಿದೆ ನೋಡಿ ವಿವರ…

    ಬೆಂಗಳೂರು: ಹೊಸ ವರ್ಷ ಕಾಲಿಡಲು ಕ್ಷಣಗಣೆಗೆ ಆರಂಭವಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ 2021 ಶುರುವಾಗಲಿದೆ.
    ಹೊಸ ವರ್ಷಕ್ಕೆ ಹೊಸ ಹೊಸ ಯೋಜನೆ ರೂಪಿಸಿಕೊಳ್ಳುವವರು ಬ್ಯಾಂಕ್​ಗಳಿಗೆ ಹೋಗುವುದು ಸಹಜ. ಅಂಥವರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ. ಪ್ರತಿವರ್ಷವೂ ಜನವರಿ 1ರಂದು ಬ್ಯಾಂಕ್​ಗಳಿಗೆ ರಜೆ ಇರುತ್ತದೋ ಇಲ್ಲವೋ ಎಂಬ ಸಂದೇಹ ಶುರುವಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿದೆ.

    ಕೆಲವು ರಾಜ್ಯಗಳಲ್ಲಿ ಜನವರಿ 1ರಂದು ಬ್ಯಾಂಕ್​ಗಳಿಗೆ ರಜೆ ಇದೆ. ಆದರೆ ಕರ್ನಾಟಕದಲ್ಲಿ ಜನವರಿ 1 ಅಥವಾ ಜನವರಿ 2 ಎರಡೂ ದಿನಗಳು ರಜೆ ಇರುವುದಿಲ್ಲ. ಎರಡೂ ದಿನಗಳು ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲಿವೆ.

    ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಬ್ಯಾಂಕ್​ಗಳು ರಜೆ ಇರುತ್ತವೆ. ಅವುಗಳನ್ನು ಬಿಟ್ಟರೆ ಜನವರಿಯಲ್ಲಿ ಕರ್ನಾಟಕದಲ್ಲಿ ರಜೆ ಇರುವುದು ಎರಡೇ ದಿನ. ಜನವರಿ 14ರ ಮಕರ ಸಂಕ್ರಾಂತಿ ಹಾಗೂ ಜನವರಿ 26ರ ಗಣರಾಜ್ಯೋತ್ಸವ.

    ಕರ್ನಾಟಕದಲ್ಲಿ ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ:

    ಜನವರಿ-9 -ಎರಡನೇ ಶನಿವಾರ
    ಜನವರಿ 10- ಭಾನುವಾರ
    ಜನವರಿ 14- ಮಕರ ಸಂಕ್ರಾಂತಿ (ಶುಕ್ರವಾರ )
    ಜನವರಿ 23-ನಾಲ್ಕನೇ ಶನಿವಾರ
    ಜನವರಿ 24-ಭಾನುವಾರ
    ಜನವರಿ 26- ಗಣರಾಜ್ಯೋತ್ಸವ (ಮಂಗಳವಾರ )

    ಜಿಯೋ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್​: ದೇಶಾದ್ಯಂತ ಉಚಿತ ಕರೆ ಸೇವೆ

    ನೂರಾರು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಭಯಾನಕ ಸರಣಿ ಹಂತಕನದ್ದು ಕೊನೆಗೂ ಆಯಿತು ಅಂತ್ಯ!

    ಪ್ರೇಯಸಿಯ ಬೆಡ್​ರೂಮ್​ವರೆಗೆ ಗುಟ್ಟಾಗಿ ಸುರಂಗ ತೋಡಿದ ಪತಿಮಹಾಶಯ- ಮುಂದೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts