More

    ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಮಗ ಅರೆಸ್ಟ್​; ಅಪ್ಪನಿಗೆ ರಜೆ ಕೊಟ್ಟು ಆರೈಕೆ ಮಾಡುತ್ತಿರುವ ಕೇರಳ ಸರ್ಕಾರ

    ತಿರುವನಂತಪುರಂ: ಬೆಂಗಳೂರಿನ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇರಳದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್​ ಅವರ ಮಗ ಬಿನೀಶ್​ ಕೊಡೆಯೇರಿಯನ್ನು ಬಂಧಿಸಿ ಕೆಲ ದಿನಗಳು ಕಳೆದಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಗ ಜೈಲು ಸೇರಿದ್ದರೆ ಅತ್ತ ಅಪ್ಪನಿಗೆ ಸರ್ಕಾರ ರಜೆ ನೀಡಿದೆ. ಆರೋಗ್ಯ ಹದಗೆಟ್ಟಿರುವ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

    ಬಾಲಕೃಷ್ಣನ್ ಅವರು ಕೆಲ ಸಮಯದ ಹಿಂದೆ ಕ್ಯಾನ್ಸರ್​ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಇತ್ತ ಮಗ ಬಂಧಿತನಾಗುತ್ತಿದ್ದಂತೆ ಅತ್ತ ಅವರು ರಜೆ ತೆಗೆದುಕೊಂಡಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಮಗನನ್ನು ರಕ್ಷಿಸಲು ಏನಾದರೂ ಸಂಚು ರೂಪಿಸುವ ಸಲುವಾಗಿ ರಜೆ ನೀಡಲಾಗಿದೆಯೇ ಎನ್ನುವ ಪ್ರಶ್ನೆಗಳು ಕೇಳಿರಬರುತ್ತಿದೆ.

    ಇದನ್ನೂ ಓದಿ: ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನೂತನ ಎಂಎಲ್ಸಿ ಚಿದಾನಂದಗೌಡ
    ಸದ್ಯ ಬಾಲಕೃಷ್ಣನ್​ ಅವರ ಬದಲಾಗಿ ಎಲ್​ಡಿಎಫ್​ನ ಕನ್ವೀನರ್​ ಎ ವಿಜಯ ರಾಘವನ್​ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಿನೀಶ್​ ಅವರನ್ನು ಅಕ್ಟೋಬರ್​ 19ರಂದು ಬಂಧಿಸಲಾಗಿದೆ. ಡ್ರಗ್ ಪೆಡ್ಲರ್​ ಮೊಹಮ್ಮದ್​ ಅನೂಪ್​ ಅವರ ನಿವಾಸದಲ್ಲಿ ಬಿನೀಶ್​ ಅವರ ಡೆಬಿಟ್​ ಕಾರ್ಡ್​ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೋಳಿ ಸಾಕಲು ಹೊರಟ ಧೋನಿ!

    ದೀಪಾವಳಿಗೆ ಗಿನ್ನೆಸ್​ ರೆಕಾರ್ಡ್​ ಬರೆಯಲಿದೆ ಅಯೋಧ್ಯೆ; ಹೇಗಿರಲಿದೆ ಗೊತ್ತಾ ಅಯೋಧ್ಯೆಯ ದೀಪಾವಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts