More

    ಕತ್ರೀನಾ ಮತ್ತು ವಿಕಿ ಕೌಶಲ್​ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?

    ಮುಂಬೈ: ಬಾಲಿವುಡ್​ ಚೆಲುವೆ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​​ ಬರುವ ಡಿಸೆಂಬರ್​ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಡಿದೆ. ಇದೀಗ ದೀಪಾವಳಿ ಸಂದರ್ಭದಲ್ಲಿ ಇವರಿಬ್ಬರ ‘ರೋಕಾ’ ನಡೆದಿದೆ ಎಂದು ವರದಿಗಳು ಹೇಳುತ್ತಿವೆ. ನಿಶ್ಚಿತಾರ್ಥದಂತೆಯೇ ಹುಡುಗ-ಹುಡುಗಿಯ ಮದುವೆಯ ನಿರ್ಧಾರವನ್ನು ‘ಗಟ್ಟಿ’ ಮಾಡುವ ಈ ವಿಶೇಷ ಕಾರ್ಯಕ್ರಮ ನಿರ್ದೇಶಕ ಕಬೀರ್​ ಖಾನ್​ರ ನಿವಾಸದಲ್ಲಿ ನಡೆಯಿತು ಎನ್ನಲಾಗಿದೆ.

    ಕತ್ರೀನಾರ ಸ್ನೇಹಿತರಾದ ಏಕ್​ ಥಾ ಟೈಗರ್​ ಚಿತ್ರ ನಿರ್ದೇಶಕ ಕಬೀರ್​ ಖಾನ್​ರನ್ನು ಆಕೆ ರಾಖಿ ಸೋದರನಂತೆ ಕಾಣುತ್ತಾರೆ. ಹಾಗಾಗಿಯೇ ರೋಕಾವನ್ನು ಅವರ ಮನೆಯಲ್ಲಿ ಕೇವಲ ಪ್ರಾಥಮಿಕ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಕತ್ರೀನಾರ ತಾಯಿ ಸುಜಾನ್​​ ಟರ್ಖೊಟ್ಟೆ, ಸೋದರಿ ಇಸಬೆಲ್ಲೆ ಕೈಫ್​ ಹಾಗೂ ವಿಕಿ ಕೌಶಲ್​​ರ ತಂದೆ ಶಾಮ್​ ಕೌಶಲ್​, ತಾಯಿ ವೀಣಾ ಕೌಶಲ್​ ಮತ್ತು ಸೋದರ ಸನ್ನಿ ಮಾತ್ರ ಪಾಲ್ಗೊಂಡರು ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

    ಇದನ್ನೂ ಓದಿ: ಬಿಜೆಪಿ ಸರ್ಕಾರಗಳ ಹಾದಿ ಹಿಡಿದ ‘ಕೈ’ ಸರ್ಕಾರ; ಪಂಜಾಬಿನಲ್ಲೂ ಇಂಧನ ಬೆಲೆ ಕಡಿತ

    ಈ ಮುನ್ನ ಕತ್ರೀನಾ ತಮ್ಮ ನಿಶ್ಚಿತಾರ್ಥದ ವದಂತಿಗಳನ್ನು ಸುಳ್ಳು ಎಂದಿದ್ದರು. ಆದರೆ, ಅವರ ಆಪ್ತರೊಬ್ಬರು, “ಸುಂದರವಾದ ರೋಕಾ ನಡೆಯಿತು. ಕತ್ರೀನಾ ಲೆಹೆಂಗಾದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಳು. ದೀವಾಲಿ ದಿನಗಳು ಒಳ್ಳೆಯ ಮುಹೂರ್ತವೆಂದು ಇಬ್ಬರ ಕುಟುಂಬಗಳು ಈ ಕಾರ್ಯಕ್ರಮ ನಡೆಸಲು ಮುಂದಾದವು. ಕಬೀರ್​ ಖಾನ್​ ಮತ್ತು ಅವರ ಪತ್ನಿ ಮಿನಿ ಮಾಥುರ್​ ಒಳ್ಳೆಯ ಆತಿಥ್ಯ ನೀಡಿದರು” ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಇನ್ನು ಈ ಹಾಟ್​ ಕಪಲ್​ನ ಮದುವೆ ಡಿಸೆಂಬರ್​ನಲ್ಲಿ ರಾಜಸ್ಥಾನದಲ್ಲಿ ನಡೆಯಲಿದೆ. ಈವರೆಗೂ ಯಾವುದೇ ಆಮಂತ್ರಣ ಹೊರಬಿದ್ದಿಲ್ಲವಾದರೂ, ತಮ್ಮ ಆಪ್ತವರ್ಗಕ್ಕೆ ಆ ತಿಂಗಳಲ್ಲಿ ಫ್ರೀಯಾಗಿರಲು ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ನವೆಂಬರ್​ 4 ರಂದು ನಡೆದ ನಿರ್ಮಾಪಕಿ ಆರತಿ ಶೆಟ್ಟಿ ಅವರ ದೀಪಾವಳಿ ಪಾರ್ಟಿಯಲ್ಲಿ ಕತ್ರೀನಾ ಮತ್ತು ವಿಕಿ ಒಟ್ಟಿಗೆ ಭಾಗವಹಿಸಿದ್ದೂ ಜಾಹೀರಾಗಿತ್ತು. (ಏಜೆನ್ಸೀಸ್)

    ನಟ ಕಮಲ್​ ಹಾಸನ್​ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?

    VIDEO| ಪುನೀತ್​​ಗೆ ಬಿರಿಯಾನಿ, ಕೋಳಿ ಸಾರು ಎಡೆಯಿಟ್ಟ ಅಭಿಮಾನಿಗಳು; ಗ್ರಾಮಸ್ಥರಿಗೂ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts