More

    ‘ಹೇರಾ ಫೇರಿ 3’ ಚಿತ್ರದಿಂದ ಅಕ್ಷಯ್​ ಔಟ್​; ಕಾರ್ತಿಕ್​ ಇನ್​ …

    ‘ಹೇರಾ ಫೇರಿ 3’ ಚಿತ್ರದಿಂದ ಅಕ್ಷಯ್​ ಔಟ್​; ಕಾರ್ತಿಕ್​ ಇನ್​ …

    ಮುಂಬೈ: ಬಾಲಿವುಡ್​ನ ಜನಪ್ರಿಯ ಚಿತ್ರಗಳ ಪೈಕಿ ‘ಹೇರಾ ಫೇರಿ’ ಸೇರಿ ಒಂದು. ಪ್ರಿಯದರ್ಶನ್​ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಸುನೀಲ್​ ಶೆಟ್ಟಿ ಮತ್ತು ಪರೇಶ್​ ರಾವಲ್​ ನಟಿಸಿದ್ದರು. ಈ ಚಿತ್ರ ಸೂಪರ್​ ಹಿಟ್​​ ಆಗಿ. ಅದರ ಮುಂದಿನ ಭಾಗ ಸಹ ಬಂದಿತ್ತು. ಇನ್ನೂ ಈ ಫ್ರಾಂಚೈಸಿಯ ಮೂರನೇ ಭಾಗ ನಿರ್ಮಾಣವಾಗಲಿದೆ ಎಂಬ ಸುದ್ದಿ ಕೆಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಈಗ ಚಿತ್ರ ಸೆಟ್ಟೇರುವುದಕ್ಕೆ ಸಜ್ಜಾಗಿದೆ. ಆದರೆ, ‘ಹೇರಾ ಫೇರಿ 3’ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅವರೇ ಇರುವುದಿಲ್ಲ ಎಂಬುದು ಗೊತ್ತಿರಲಿ.

    ಇದನ್ನೂ ಓದಿ: ಆಸೆಪಟ್ಟಿದ್ದು ಕೋಳಿ ಕಳ್ಳನ ಪಾತ್ರ; ಸಿಕ್ಕಿದ್ದು ಇನ್​ಸ್ಪೆಕ್ಟರ್​ ಪಾತ್ರ …

    ಹೌದು, ‘ಹೇರಾ ಫೇರಿ 3’ ಚಿತ್ರದಲ್ಲಿ ಪರೇಶ್​ ರಾವಲ್​ ಮತ್ತು ಸುನೀಲ್​ ಶೆಟ್ಟಿ ಮುಂದುವರೆಯಲಿದ್ದಾರೆ. ಆದರೆ, ಅಕ್ಷಯ್​ ಕುಮಾರ್​ ಮಾತ್ರ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರ ಬದಲಿಗೆ ಕಾರ್ತಿಕ್​ ಆರ್ಯನ್​ ಬಂದಿದ್ದಾರೆ. ಇಷ್ಟಕ್ಕೂ ಅಕ್ಷಯ್​ ಚಿತ್ರತಂಡದಿಂದ ಔಟ್​ ಆಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವೇ. ಈ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ.

    ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಟಿಸುವುದಕ್ಕೆ ಅಕ್ಷಯ್​ ಕುಮಾರ್​ 90 ಕೋಟಿ ರೂ. ಸಂಭಾವನೆ ಕೇಳಿದರಂತೆ. ಜತೆಗೆ ಲಾಭದಲ್ಲಿ ಒಂದಿಷ್ಟು ಭಾಗವನ್ನೂ ಕೇಳಿದ್ದಾರೆ. ಇನ್ನು, ‘ಭೂಲ್​ ಭುಲಯ್ಯ 2’ ಚಿತ್ರದ ನಂತರ ಬಾಲಿವುಡ್​ನಲ್ಲಿ ಸ್ಟಾರ್ ಪಟ್ಟಕ್ಕೇರಿರುವ ಕಾರ್ತಿಕ್​ 30 ಕೋಟಿ ರೂ. ಸಂಭಾವನೆ ಕೇಳಿದರಂತೆ. ಸ್ಯಾಟಿಲೈಟ್​ ಮತ್ತು ಡಿಜಿಟಲ್​​ ಹಕ್ಕುಗಳ ವಿಚಾರವಾಗಿ ನೋಡಿದರೆ, ಅಕ್ಷಯ್​ಗಿಂತ ಕಾರ್ತಿಕ್​ಗೆ ಹೆಚ್ಚು ಮಾರುಕಟ್ಟೆ ಮತ್ತು ಡಿಮ್ಯಾಂಡ್​ ಇದೆಯಂತೆ. ಮೇಲಾಗಿ ಅವರ ಸಂಭಾವನೆ ಸಹ ಕಡಿಮೆ ಇರುವುದರಿಂದ, ಅವರೇ ಇರಲಿ ಎಂಬ ತೀರ್ಮಾನಕ್ಕೆ ನಿರ್ಮಾಪಕ ಫಿರೋಜ್​ ನಡಿಯಾಡ್ವಾಲ ಬಂದಿದ್ದಾರೆ. ಇನ್ನು, ಅಕ್ಷಯ್​ ಕುಮಾರ್​ಗೆ ಸಂಭಾವನೆ ಕಡಿಮೆ ಮಾಡಿಕೊಳ್ಳುವುದಕ್ಕೆ ಬೇಡಿಕೆ ಇಟ್ಟಿದ್ದರೂ, ಅಕ್ಷಯ್​ ಮಾತ್ರ ಕ್ಯಾರೇ ಎನ್ನಲಿಲ್ಲವಂತೆ. ಅದೇ ಕಾರಣಕ್ಕೆ ‘ಹೇರಾ ಫೇರಿ 3’ ಚಿತ್ರವನ್ನು ಕಾರ್ತಿಕ್​, ಪರೇಶ್​ ರಾವಲ್​ ಮತ್ತು ಸುನೀಲ್​ ಶೆಟ್ಟಿ ಜತೆಗೆ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಹೀರೋ ಆದ ಸುನಾಮಿ ಕಿಟ್ಟಿ; ‘ಕೋರ’ ಚಿತ್ರದ ಟೀಸರ್​ ಬಿಡುಗಡೆ

    ‘ಹೇರಾ ಫೇರಿ’ ಚಿತ್ರವನ್ನು ಅನೀಸ್​ ಬಜ್ಮಿ ನಿರ್ದೇಶಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಅವರ ಜತೆಗೆ ಮಾತುಕಥೆ ನಡೆದಿದ್ದು, ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.

    ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts