ದೆಹಲಿ: ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು, ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರನ್ನು ಇದುವರೆಗೂ ಯಾಕೆ ಬಂಧಿಸಿಲ್ಲ ಎಂದು ಇಡಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ನೆಟ್ಟಿಗರು ಮೆಚ್ಚಿದ ಸಮಂತಾ ಅಭಿನಯದ ‘ಯಶೋದ’
200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್ಲಿನ್ ಫರ್ನಾಂಡಿಸ್ ಸಹ ಆರೋಪಿಯಾಗಿದ್ದು, ಆಕೆ ದೇಶ ಬಿಟ್ಟು ಹೋಗದಂತೆ ಇಡಿ ಅಧಿಕಾರಿಗಳು ಲುಕ್ಔಟ್ ನೋಟೀಸ್ ಹೊರಡಿಸಿದ್ದಾರೆ. ಈ ಮಧ್ಯೆ, ಜಾಕ್ಲೀನ್ನ ಜಾಮೀನು ಅರ್ಜಿ ವಿಚಾರಣೆ ಪಟಿಯಾಲಾ ಕೋರ್ಟ್‌ನಲ್ಲಿ ನಡೆದಿದ್ದು ತೀರ್ಪನ್ನು ಇದೇ ತಿಂಗಳ 15ಕ್ಕೆ ಕಾಯ್ದಿರಿಸಲಾಗಿದೆ.
ಗುರುವಾರ ನಡೆದ ವಿಚಾರಣೆ ವೇಳೆ, ಜಾಕ್ಲೀನ್ ಮೇಲೆ ಅಷ್ಟೊಂದು ಗುರುತರವಾದ ಆರೋಪಗಳಿದ್ದರೂ, ಆಕೆಯನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ನ್ಯಾಯಾಲಯವು ಇ.ಡಿ. ತನಿಖಾಧಿಕಾರಿಗಳನ್ನು ಪ್ರಶ್ನಿಸಿದೆ ಎಂದು ಹೇಳಲಾಗಿದೆ. ಪ್ರಕರಣದ ಹಲವು ಆರೋಪಿಗಳು ಜೈಲಿನಲ್ಲಿದ್ದರೂ ಜಾಕ್ಲಿನ್ ಅವರನ್ನು ಮಾತ್ರ ಯಾಕೆ ಇದುವರೆಗೂ ಬಂಧಿಸಿಲ್ಲ, ಈ ಪಕ್ಷಪಾತ ಯಾಕೆ ಎಂದು ಪ್ರಶ್ನಿಸಿದ್ದು, ಇದರಿಂದ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್; ಹೆಸರೇನು ಗೊತ್ತಾ?Delhi Cou
ಅ.22ರಂದು ನ್ಯಾಯಾಲಯವು ನ್ಯಾಯಾಲಯವು ಜಾಕ್ಲೀನ್ಗೆ ಮಧ್ಯಂತರ ಜಾಮೀನು ನೀಡಿದ್ದು, ಅದು ನ. 10ಕ್ಕೆ ಮುಕ್ತಾಯವಾಗಿತ್ತು. ಇನ್ನೂ ನಾಲ್ಕು ದಿನಗಳ ಕಾಲ ಜಾಮೀನು ವಿಸ್ತಿರಿಸಿರುವ ನ್ಯಾಯಾಲಯವು, ತೀರ್ಪನ್ನು ನವೆಂಬರ್ 15ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.