More

    ರೇಬಿಸ್​​ನಿಂದ ಸಾವು, ಕರ್ನಾಟಕದಲ್ಲೇ ಅತ್ಯಧಿಕ ಪ್ರಕರಣ: ಲಸಿಕೆ ನೀಡಿದ್ದರೂ ದೇಶದಲ್ಲಿ ಒಟ್ಟು 250 ಮಂದಿ ಮರಣ

    ಬೆಂಗಳೂರು: ರೇಬಿಸ್‌ನಿಂದ ದೇಶದಲ್ಲಿ ಸಂಭವಿಸಿರುವ ಸಾವುಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 32 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.

    ದೇಶದ 18 ರಾಜ್ಯಗಳಲ್ಲಿ 2022ರ ಜನವರಿಯಿಂದ ಈವರೆಗೂ 250 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ಅತೀ ಹೆಚ್ಚು 32 ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 24, ತಮಿಳುನಾಡಿನಲ್ಲಿ 22, ಕೇರಳ ಮತ್ತು ತೆಲಂಗಾಣದಲ್ಲಿ ತಲಾ 21, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಲಾ 19, ನಂತರ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ 18 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

    ಕೇರಳದಲ್ಲಿ ಸಂತ್ರಸ್ತರಿಗೆ ಲಸಿಕೆ ನೀಡಿದ್ದರೂ ಸಾವಿಗೆ ಕಾರಣವಾಗುವ ಲಸಿಕೆಗಳ ಮಾದರಿಗಳ ಮತ್ತು ಗುಣಮಟ್ಟದ ಪರೀಕ್ಷೆ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಸಂತ್ರಸ್ತರಿಗೆ ನೀಡಲಾಗಿದ್ದ ಲಸಿಕೆಯನ್ನು ಕಸೌಲಿಯ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಪುನರಾವರ್ತಿತ ಗುಣಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಿತ ಎಲ್ಲಾ ಬ್ಯಾಚ್‌ಗಳು ಅಗತ್ಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಪ್ರಯೋಗಾಲಯ ವರದಿ ನೀಡಿದೆ ಎಂದು ಮಾಹಿತಿ ನೀಡಿದರು.

    ಲಸಿಕೆಗಳ ಗುಣಮಟ್ಟ ಪರೀಕ್ಷೆ: ಆ್ಯಂಟಿ ರೇಬೀಸ್ ಲಸಿಕೆ ಪಡೆದವರಲ್ಲಿ ಆರು ಮಂದಿ ಸಾವಿಗೀಡಾಗಿದ್ದರು. ಇದರಿಂದ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಕೇರಳದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ರಾಜ್ಯದಲ್ಲಿ ಸುಮಾರು 2 ಮಿಲಿಯನ್ ನಾಯಿ ಕಡಿತ ವರದಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೇರಳಕ್ಕೆ ತಂಡವನ್ನು ಕಳುಹಿಸಿತ್ತು. ಕೇರಳ ಸರ್ಕಾರ ನೀಡಿದ ಮಾಹಿತಿ ಅನ್ವಯ, ಎಲ್ಲಾ ಲಸಿಕೆಗಳು ಮತ್ತು ಇಮ್ಯುನೊಗ್ಲೋಬ್ಯುಲಿನ್ ಬ್ಯಾಚ್‌ಗಳನ್ನು ವಿತರಣೆಯ ಮೊದಲು ಗುಣಮಟ್ಟ ಪರೀಕ್ಷೆ ಮಾಡಿಸಲಾಗಿದೆ ಎಂದು ಸಚಿವರು ಹೇಳಿದರು.

    ರೇಬೀಸ್ ನಿಯಂತ್ರಣ ಕಾರ್ಯಕ್ರಮ: ರೇಬಿಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಚಿವಾಲಯವು 12ನೇ ಪಂಚವಾರ್ಷಿಕ ಯೋಜನೆಯಿಂದ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಪ್ರಾರಂಭಿಸಿದೆ. ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮವನ್ನು ದೇಶದಾದ್ಯಂತ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ಹೊರತುಪಡಿಸಿ) ಜಾರಿಗೊಳಿಸಲಾಗಿದೆ ಎಂದು ಹೇಳಿದರು.

    ರಾಷ್ಟ್ರೀಯ ಉಚಿತ ಔಷಧ ಉಪಕ್ರಮದ ಮೂಲಕ ಪ್ರಾಣಿ ಕಡಿತದ ಸಂತ್ರಸ್ತರಿಗೆ ಆಂಟಿ ರೇಬೀಸ್ ಲಸಿಕೆ ಖರೀದಿ, ವೈದ್ಯಕೀಯ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ತರಬೇತಿಯ ಮೂಲಕ ಸಾಮರ್ಥ್ಯ ವೃದ್ಧಿ ಮತ್ತು ಮಾನವ ರೇಬೀಸ್ ಮತ್ತು ನಾಯಿ ಕಡಿತ ಪ್ರಕರಣಗಳ ಕಣ್ಗಾವಲು ಬಲಪಡಿಸುವುದು ಸೇರಿದಂತೆ ವಿವಿಧ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

    ದೇಶದಲ್ಲಿ ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕೈಗೊಂಡಿರುವ ಕ್ರಮಗಳ ಕುರಿತು ಇದೇ ವೇಳೆ ಮಾಹಿತಿ ನೀಡಿದ ಸಚಿವರು, ರೇಬಿಸ್ ವಿರೋಧಿ ಲಸಿಕೆಗಳ ತಯಾರಿಕೆಯನ್ನು ಸಂಪೂರ್ಣ ಸಾಮರ್ಥ್ಯದೊಂದಿಗೆ ಕೈಗೊಳ್ಳಲು ಎಲ್ಲಾ ತಯಾರಕರಿಗೂ ಸೂಚಿಸಲಾಗಿದೆ. ದೇಶದಲ್ಲಿ ಸರ್ಕಾರಿ ಸಂಸ್ಥೆ ಸರಬರಾಜು ಸೇರಿದಂತೆ ದೇಶೀಯ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ವಿವರಿಸಿದರು.

    ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

    ನಿಮಗೂ ಹೀಗಾಗಿರಬಹುದು!; ಜಿಮೇಲ್​ ಸಮಸ್ಯೆ-ಸ್ಥಗಿತ, ಜಗತ್ತಿನಾದ್ಯಂತ ಲಕ್ಷಗಟ್ಟಲೆ ಜನರ ಪರದಾಟ..

    ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!

    ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!

    ಇಬ್ಭಾಗವಾಗುತ್ತಾ ಉತ್ತರಕನ್ನಡ ಜಿಲ್ಲೆ?; ಸಚಿವ ಹೆಬ್ಬಾರ್​ ಪ್ರತಿಕ್ರಿಯೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts