More

    ಇಂದು ರಾಜ್ಯದಲ್ಲಿ ಪತ್ತೆಯಾದ ಕರೊನಾ ಪ್ರಕರಣಗಳ ಸಂಖ್ಯೆ ಎಷ್ಟು? ಒಂದೂ ಪ್ರಕರಣ ಕಾಣಿಸಿಕೊಳ್ಳದ ಜಿಲ್ಲೆ ಯಾವುದು?

    ಬೆಂಗಳೂರು: ರಾಜ್ಯದಲ್ಲಿ ಇಂದು 1,978 ಜನರಲ್ಲಿ ಕರೊನಾ ಸೋಂಕು ಇರುವುದು ದೃಢವಾಗಿದೆ. ಈ ಮೂಲಕ ಇದುವರೆಗೆ ಕಾಣಿಸಿಕೊಂಡ ಒಟ್ಟಾರೆ ಪ್ರಕರಣಗಳ ಸಂಖ್ಯೆ 28,71,298ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 56 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 35,835ಕ್ಕೆ ಹೆಚ್ಚಳವಾಗಿದೆ.

    ಇಂದು 2,326 ಸೋಂಕಿತರು ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 27,98,703 ಸೋಂಕಿತರು ಗುಣಮುಖವಾಗಿದ್ದು, 36,737 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.24ಕ್ಕೆ ಕುಸಿದಿದ್ದು, ಮರಣ ಪ್ರಮಾಣ ಶೇ. 2.83ರಷ್ಟಿದೆ.

    ಬೆಂಗಳೂರು ನಗರದಲ್ಲಿ 433, ಮೈಸೂರು 261, ದಕ್ಷಿಣ ಕನ್ನಡ 195, ಶಿವಮೊಗ್ಗ 124, ಬೆಳಗಾವಿ 112, ತುಮಕೂರಿನಲ್ಲಿ 100 ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆಯಲ್ಲಿ ಹೊಸದಾಗಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಬಳ್ಳಾರಿ, ಬೀದರ್, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಕುಸಿದಿದೆ. 10 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯಕ್ಕಿಳಿದಿದೆ. 21 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ. (ಏಜೆನ್ಸೀಸ್)

    ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ

    2 ತಿಂಗಳ ಹಸುಗೂಸನ್ನು ಸೆಕ್ಯೂರಿಟಿಗಾರ್ಡ್ ಮನೆ ಮುಂದಿಟ್ಟು ಪರಾರಿ!

    ಬಾಲಿವುಡ್ ನಟಿ ತಾಪ್ಸಿ ಪನ್ನು ಬಾಯ್​ಫ್ರೆಂಡ್​ಗೆ ಇಂದು ಜನ್ಮದಿನದ ಸಂಭ್ರಮ; ಹೇಗಿತ್ತು ಬರ್ತ್​ಡೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts