More

    ಮಾಜಿ ಪ್ರಧಾನಿಗಳಿಗೆ ಇದ್ದಂತೆ ಮಾಜಿ ಮುಖ್ಯಮಂತ್ರಿಗಳಿಗೂ ರಾಜ್ಯದಲ್ಲಿ ಮ್ಯೂಸಿಯಂ!

    ಬೆಂಗಳೂರು: ಮಾಜಿ ಪ್ರಧಾನಿಗಳಿಗೆಂದೇ ದೇಶದಲ್ಲಿ ಮ್ಯೂಸಿಯಂ ಇದೆ. ಪ್ರಧಾನಿಗಳ ರೀತಿಯಲ್ಲೇ ಮುಖ್ಯಮಂತ್ರಿಗಳೂ ರಾಜ್ಯದ ಜನತೆಗಾಗಿ ದುಡಿದಿರುತ್ತಾರೆ. ಇದನ್ನೆಲ್ಲಾ ಮಕ್ಕಳಿಗೆ ತಿಳಿಸುವ ಸಲುವಾಗಿ ಸಾಹಿತ್ಯ ಸೃಷ್ಟಿ ಆಗಬೇಕು. ಅದರ ಜತೆಗೆ ಮ್ಯೂಸಿಯಂ ಕೂಡ ನಿರ್ಮಾಣ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈ ವಿಚಾರವಾಗಿ ಹಾಗೂ ಕೆಸಿ ರೆಡ್ಡಿ ಪ್ರತಿಮೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ ‘ರಾಜ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದವರು ಕೆ.ಸಿ.ರೆಡ್ಡಿಯವರ ಪ್ರತಿಮೆ ಅನಾವರಣಗೊಳಿಸಲಾಗಿದೆ. ಕೃಷಿ ಕುಟುಂಬದಿಂದ ಬಂದು ವಕೀಲಿ ವೃತ್ತಿ ಆರಂಭಿಸಿ, ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ ಸಮಾಜದ ಎಲ್ಲ ಆಯಾಮ ತಿಳಿದುಕೊಂಡು ಪ್ರಜಾ ಪ್ರತಿನಿಧಿ ಪಕ್ಷವನ್ನು ಸ್ಥಾಪನೆ ಮಾಡಿವರು. ರಾಜ್ಯದ ಮಂತ್ರಿಯಾಗಿ ಕೇಂದ್ರದಲ್ಲೂ ಕೆಲಸ ಮಾಡಿದವರು.

    ಇದನ್ನೂ ಓದಿ: VIDEO | ನೀವೇ ಸಿಎಂ ಎಂದು ಗೊತ್ತಾಗಿಲ್ಲ! ಬೆಳ್ಳಂಬೆಳಗ್ಗೆ ಚಹಾ ಅಂಗಡಿಯವನಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ

    ವಿಧಾನಸಭೆ, ರಾಜ್ಯಸಭೆ, ಲೋಕಸಭೆಯನ್ನು ಪ್ರತಿನಿಧಿಸಿದವರು. ಭವಿಷ್ಯದ ನಾಡು ಕಟ್ಟಲು ಅವತ್ತುವಯಾವ ಅವಶ್ಯಕತೆ ಇತ್ತು ಆ ಕೆಲಸ ಮಾಡಿದ್ದರು. ಶಾಸನ ಸಭೆ ರಚನೆ, ಸರ್ಕಾರದ ಯಂತ್ರ ಸಿದ್ಧಪಡಿಸುವುದು, ಜನರಿಗೆ ಸೇವೆ ನೀಡುವ ಸಂಸ್ಥೆಯ ಪ್ರಾರಂಭ ಸೇರಿದಂತೆ ನಾಲ್ಕೂವರೆ ವರ್ಷದಲ್ಲಿ ದೊಡ್ಡ ಕೆಲಸ ಮಾಡಿದರು.

    ಅವರು ತಮ್ಮ ಆದರ್ಶವನ್ನು ಆಡಳಿತದಲ್ಲಿ ಬಿಟ್ಟಿದ್ದಾರೆ.‌ ಅತ್ಯಂತ ದಕ್ಷ, ಪ್ರಾಮಾಣಿಕ ಆಡಳಿತ ವ್ಯವಸ್ಥೆ ಬಯಸಿದ್ದರು ಮತ್ತು ಆ ದಿಕ್ಕಿನಲ್ಲಿ ಕೆಲಸ ಮಾಡಿದರು. ಜೆಸಿ ರೆಡ್ಡಿ ನಡೆದು ಬಂದ ದಾರಿ ನಮಗೆಲ್ಲ ಪ್ರೇರಣೆ. ನಾವೆಂದಿಗೂ ಮರೆಯಲು ಸಾಧ್ಯವಿಲ್ಲ. ಆ ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಭವಿಷ್ಯದ ಕರ್ನಾಟಕದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ.

    ಮೊದಲ ಬಾರಿಗೆ ಪ್ರತಿಮೆ ಮಾಡಿದಾಗ ಅದು ಸರಿಯಾಗಿ ಆಗಿಲ್ಲ ಎಂಬ ಭಾವನೆ ಅನೇಕರಲ್ಲಿತ್ತು. ಹೊಸ ಪ್ರತಿಮೆ ಆಗಬೇಕೆಂದು ಅನೇಕರು ಬಯಸಿದರು. ನನಗೂ ಅನಿಸಿತ್ತು. ಹೀಗಾಗಿ ಕೂಡಲೇ ಹೊಸ ಪ್ರತಿಮೆ ಸ್ಥಾಪನೆಗೆ ಸೂಚಿಸಲಾಗಿತ್ತು.‌ಕಳೆದ ಅವರ ಜನ್ಮ‌ದಿನದಂದೇ ಸ್ಥಾಪನೆಯಾಗಬೇಕಿತ್ತು. ಬೇರೆ ಬೇರೆ ಕಾರಣದಿಂದ ತಡವಾಗಿತ್ತು.

    ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ!

    ಕರ್ನಾಟಕ ಕಟ್ಟಿದವರನ್ನು‌ ಮುಂದಿನ‌ ಜನಾಂಗ ಮರೆಯಬಾರದು. ಅವರ ತ್ಯಾಗ, ಬಲಿದಾನ, ದೂರದೃಷ್ಟಿ, ಆದರ್ಶ ತತ್ವಗಳಿಂದಾಗಿ ಕರ್ನಾಟಕವನ್ನು ಬೇರೆ ರಾಜ್ಯಗಳಿಗಿಂತ ವಿಭಿನ್ನವಾಗಿ ಬಿಂಬಿಸಲು ಸಾಧ್ಯವಾಗಿದೆ. ಎಲ್ಲ‌ ಮುಖ್ಯಮಂತ್ರಿಗಳ ಕುರಿತು ಸಾಹಿತ್ಯ ರಚಿಸಿ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಹಾಗೆಯೇ ಕರ್ನಾಟಕ ರಚನೆಯಾದಾಗ ಜನರ ಮನಸ್ಥಿತಿ, ಕೈಗೊಂಡ ನಿರ್ಧಾರ ಹೋರಾಟ ಬಿಂಬಿಸುವ ಮ್ಯೂಸಿಯಂ ಅವಶ್ಯಕತೆ ಇದೆ.

    ದೆಹಲಿಯಲ್ಲಿ ಎಲ್ಲ ಪ್ರಧಾನಿಗಳ‌ ಮಾಹಿತಿ ಇರುವ ಮ್ಯೂಸಿಯಂ ಇದೆ. ಇಲ್ಲಿ ಕೂಡ ಅಂಥಹದ್ದೇ ಮ್ಯೂಸಿಯಂ ಅವಶ್ಯಕತೆ ಇದೆ. ಇದರ ಬಗ್ಗೆ ಎಲ್ಲರ ಜತೆ ಚರ್ಚೆ ಮಾಡಿ ಬರುವ ದಿನಗಳಲ್ಲಿ ಅನುಷ್ಠಾನ ಮಾಡಲಾಗುವುದು. ಕೆಸಿ ರೆಡ್ಡಿ ಹುಟ್ಟೂರಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಬೆಂಬಲ‌ ನೀಡಲಾಗುತ್ತದೆ. ವಿಧಾನಸಭೆಯಲ್ಲಿ ಅವರ ಫೋಟೋ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts