More

    ರಿವ್ಯೂ ಬರೆದುಕೊಡುವ ಕೆಲಸಕ್ಕೆ ಸೇರಿ 29 ಲಕ್ಷ ರೂ. ಕಳಕೊಂಡ ಯುವಕ!

    ಮುಂಬೈ: ಹೋಟೆಲ್‌ಗಳು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವ ಕೆಲಸಕ್ಕೆ ಸೇರಿದ 29 ವರ್ಷದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿ ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಸೇನಾ ಆಫಿಸರ್​ ಸೋಗು ಹಾಕಿ ಉದ್ಯಮಿಯನ್ನು ವಂಚಿಸಿದ ಸೈಬರ್ ಕಳ್ಳರು!

    ಪೊಲೀಸರ ಪ್ರಕಾರ, ಫೆಬ್ರವರಿ 5ರಂದು ದೂರುದಾರರು ತಮ್ಮ ಫೋನ್‌ಗೆ ಪಾರ್ಟ್​ಟೈಂ ಉದ್ಯೋಗ ಸಂಬಂಧಿತ ಸಂದೇಶ ಬಂದಿದೆ. ಪ್ರತಿ ವಿಮರ್ಶೆಗೆ 50 ರೂ. ನೀಡುವುದಾಗ ವಂಚಕರು ಭರವಸೆ ನೀಡಿದರು. ಈತ ಮೆಸೇಜ್​ನಲ್ಲಿ ಒದಗಿಸಲಾದ ಲಿಂಕ್ ಮೂಲಕ ಟೆಲಿಗ್ರಾಮ್ ಗುಂಪಿಗೆ ಸೇರಿಕೊಂಡರು. ಈ ಪಾರ್ಟ್​ ಟೈಂ ಕೆಲಸದ ಹೊರತಾಗಿ ಅವರು ಕೆಲವು ಆನ್‌ಲೈನ್ ಕಾರ್ಯಗಳನ್ನು ನಿರ್ವಹಿಸಬೇಕು. ಮಾಡಿದ ಕೆಲಸಕ್ಕೆ ಹಣ ಪಡೆಯುವ ಮೊದಲು ಕೊಟ್ಟ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ಹಣ ಪಾವತಿಸಬೇಕಾಗುತ್ತದೆ ಎಂಬ ಷರತ್ತು ಇತ್ತು.

    ಇದನ್ನೂ ಓದಿ: ಒಟಿಪಿ ಇಲ್ಲದೆ ಬ್ಯಾಂಕ್ ಖಾತೆಗೆ ಕನ್ನ; ಗುಜರಾತ್​ನ ವಡೋದರದಲ್ಲಿ ಸೈಬರ್ ವಂಚಕರ ಕೃತ್ಯ

    ಕೆಲಸ ಪೂರ್ಣಗೊಳಿಸಲು ದೂರುದಾರ 5 ಲಕ್ಷ ಪಾವತಿಸಿದ್ದು, ಬಳಿಕ ತೆರಿಗೆ ಕಟ್ಟಬೇಕು, ಇಲ್ಲವಾದಲ್ಲಿ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ವಂಚಕರು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕರು 13 ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವಿವಿಧ ನೆಪದಲ್ಲಿ ಒಟ್ಟು 29 ಲಕ್ಷ ರೂ. ಯನ್ನು ದೂರುದಾರನಿಂದ ಸುಲಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ದೂರುದಾರರಿಗೆ ಅವರ ಹಣವನ್ನು ಮನಿ ಲಾಂಡರಿಂಗ್ ಏಜೆನ್ಸಿ ವಶಪಡಿಸಿಕೊಂಡಿದೆ ಎಂದು ತಿಳಿಸಲಾಯಿತು. ಇದಾದ ಮೇಲೆಎ ಹೆಚ್ಚಿನ ಹಣಕ್ಕಾಗಿ ವಂಚಕರು ಬೇಡಿಕೆ ಇರಿಸಿದರು. ಈ ವೇಳೆ ವ್ಯಕ್ತಿ ತಾನು ಮೋಸ ಹೋಗಿರುವುದನ್ನು ಅರಿತು ಪೊಲೀಸರನ್ನು ಸಂಪರ್ಕಿಸಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts