More

    ನಾಳೆ ದ್ವಿತೀಯ ಪಿಯು ರಿಸಲ್ಟ್; ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಲಿಂಕ್…

    ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಏ.21ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಲಿದೆ.

    ಮಾ.9ರಿಂದ 29ರ ವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಪೂರ್ಣಗೊಂಡಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಯ ನಂತರ ಲಿತಾಂಶವನ್ನು ಆನ್‌ಲೈನ್ ಮೂಲಕ ಪ್ರಕಟಿಸಲಿದೆ.

    ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ನಲ್ಲಿ ವೀಕ್ಷಿಸಬಹುದು.

    ಇದನ್ನೂ ಓದಿ: PHOTOS | ಸ್ಕೇಟಿಂಗ್ ಬೋರ್ಡ್ ಮೇಲೆ ಅಜ್ಜಿಯಂದಿರ ಸಾಹಸ! ಫೋಟೋ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು…

    ಫಲಿತಾಂಶ ಹೆಚ್ಚಳ ನಿರೀಕ್ಷೆ:

    ಕಳೆದ ಬಾರಿ ಪ್ರಕಟವಾಗಿದ್ದ ಶೇ.61.88 ಲಿತಾಂಶವು ಇಲ್ಲಿಯವರೆಗಿನ ದಾಖಲೆ ಫಲಿತಾಂಶವಾಗಿದೆ. ಆದರೆ, ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳ ಮಾಡಬೇಕೆಂಬ ಉದ್ದೇಶದಿಂದಲೇ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾವಣೆ ಮಾಡಲಾಗಿತ್ತು. ಬಹುಆಯ್ಕೆ ಮಾದರಿ ಪ್ರಶ್ನೆಗಳನ್ನು ನೀಡುವ ಮೂಲಕ ಸುಲಭ ಪ್ರಶ್ನೆ ಪತ್ರಿಕೆಯನ್ನು ನೀಡಿತ್ತು. ಹೀಗಾಗಿ ಈ ಬಾರಿ ಫಲಿತಾಂಶ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts