More

    ಕಾರ್ಗಿಲ್ ವಿಜಯೋತ್ಸವ: ನ್ಯಾಷನಲ್ ವಾರ್ ಮೆಮೋರಿಯಲ್‍ನಲ್ಲಿ ರಕ್ಷಣಾ ಸಚಿವರಿಂದ ಗೌರವ ಸಮರ್ಪಣೆ

    ನವದೆಹಲಿ: ಕಾರ್ಗಿಲ್ ವಿಜಯೋತ್ಸವದ 21ನೇ ವರ್ಷಾಚರಣೆ ಇಂದು ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನ್ಯಾಷನಲ್ ವಾರ್ ಮೆಮೋರಿಯಲ್‍ ಗೆ ತೆರಳಿ ಅಮರ್ ಜ್ಯೋತಿ ಜವಾನ್‍ ನಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. 1999ರಲ್ಲಿ ಎರಡೂವರೆ ತಿಂಗಳು ಕಾಲ ನಡೆದ ಯುದ್ಧ ಇದಾಗಿದ್ದು, ಆಪರೇಷನ್ ವಿಜಯದ ಮೂಲಕ ನಮ್ಮ ಭೂಭಾಗವನ್ನು ಮತ್ತೆ ಶತ್ರುಗಳಿಂದ ವಶಪಡಿಸಿಕೊಂಡು ನಿರ್ಣಾಯಕ ಗೆಲುವ ಕಂಡ ದಿವಸ ಇದು. ಈ ಯುದ್ಧದಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಭಾರತದ 500ಕ್ಕೂ ಹೆಚ್ಚು ವೀರ ಯೋಧರು ಪ್ರಾಣಬಲಿದಾನ ಮಾಡಿದ್ದಾರೆ.

    ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಸಂದರ್ಭದಲ್ಲಿ ದೇಶದ ಎಲ್ಲ ಪ್ರಜೆಗಳಿಗೂ ಶುಭ ಹಾರೈಸುತ್ತೇನೆ. ಕಾರ್ಗಿಲ್ ಯುದ್ಧ ಗೆಲ್ಲೋದಕ್ಕೆ ಕಾರಣವಾಗಿದ್ದು ನಮ್ಮ ಯೋಧರ ತ್ಯಾಗ, ಬಲಿದಾನಗಳಿಂದಾಗಿ. ಅದುವೇ ನಮ್ಮ ಸಶಸ್ತ್ರಪಡೆಗಳ ಪಾಲಿಗೆ ಯಾವತ್ತಿಗೂ ಪ್ರೇರಣೆ ಕೂಡ ಎಂದು ಅವರು ಹೇಳಿದರು.

    ಇದನ್ನೂ ಓದಿ: ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ

    ನ್ಯಾಷನಲ್ ವಾರ್ ಮೆಮೋರಿಯಲ್‍ನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ವೇಳೆ ಅವರ ಜತೆಗೆ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್, ಚೀಫ್ ಆಫ್‍ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂಎಂನರವಣೆ, ಏರ್‍ ಚೀಫ್ ಮಾರ್ಷೆಲ್ ‍ಆರ್.ಕೆ.ಎಸ್.ಭದುರಿಯಾ, ನೇವಿ ಚೀಫ್ ಅಡ್ಮಿರಲ್ ಕರಂಬೀರ್ ಸಿಂಗ್‍ ಕೂಡ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

    ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts