More

    ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ

    ಭೋಪಾಲ:  ಕರೊನಾ ಸೋಂಕು ನಿವಾರಣೆಗೆ ಬೇರೆ ಬೇರೆ ರೀತಿಯ ಪ್ರಯತ್ನಗಳು ಆಗುತ್ತಿವೆ. ಅಲೋಪಥಿ ವೈದ್ಯ ಕ್ರಮದಲ್ಲಿ ಔಷಧದ ಸಂಶೋಧನೆ, ಮಾನವ ಪ್ರಯೋಗ ಇತ್ಯಾದಿ ಶುರುವಾಗಿದೆ. ಆಯುರ್ವೇದದಲ್ಲಿ ವೈರಾಣುವಿಗೆ ಔಷಧ ಮೊದಲೇ ಇದ್ದು, ಅದು ಈ ವೈರಸ್‍ ಸೋಂಕು ನಿವಾರಣೆಗೂ ಪರಿಣಾಮಕಾರಿ ಎಂಬ ಪ್ರತಿಪಾದನೆ, ಬಳಕೆ ಶುರುವಾಗಿದೆ. ಇವೆಲ್ಲದರ ನಡುವೆ, ಆಧ್ಯಾತ್ಮಿಕ ಪ್ರಯತ್ನವೂ ಇರಲಿ ಎಂದು ಪ್ರತಿಪಾದನೆಯೂ ಇದೆ.

    ಇದನ್ನೂ ಓದಿ: ಆರಂಭವಾಗಿದೆ ಅನ್​ಲಾಕ್​ 3.0ಗೆ ಕ್ಷಣಗಣನೆ; ಶಾಲೆ-ಕಾಲೇಜು, ಮೆಟ್ರೋ ಪುನರಾರಂಭ ಅನುಮಾನ

    “ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ  ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ” ಎಂದು ಯಾರಾದರೂ ಕರೆ ಕೊಟ್ಟರೆ ಕೂಡಲೇ ಆಗಸ್ಟ್‍ 5ರ ತನಕ ಯಾಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಹೇಳಿಕೆ ಕೊಟ್ಟವರು ಬೇರಾರೂ ಅಲ್ಲ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. ಅವರು ಈ ಬಗ್ಗೆ ವಿಡಿಯೋ ಹೇಳಿಕೆಯನ್ನೂ ಅಪ್ಲೋಡ್ ಮಾಡಿದ್ದಾರೆ.

    ಭೋಪಾಲದಲ್ಲಿ ಜುಲೈ 25ರಿಂದ ಆಗಸ್ಟ್ 4 ರ ತನಕ ಲಾಕ್‍ಡೌನ್ ಚಾಲ್ತಿಯಲ್ಲಿದೆ. ಈ ಸಂದರ್ಭದಲ್ಲಿ ಲಾಕ್‍ಡೌನ್ ನಿಯಮವನ್ನು ಪಾಲಿಸುತ್ತ, ಕರೊನಾ ವೈರಸ್ ಓಡಿಸಲು ದಿನಕ್ಕೆ ಐದು ಸಲ ಹನುಮಾನ್ ಚಾಲೀಸ ಪಠಿಸಬೇಕು. ಇದನ್ನು ಆಗಸ್ಟ್ 5ರ ತನಕ ಮಾಡಬೇಕು. ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದ್ದು, ಜನರಿಗೆ ಉತ್ತಮ ಆರೋಗ್ಯ ಭಾಗ್ಯ ಸಿಗುವಂತಾಗಲು ಎಲ್ಲರೂ ಒಟ್ಟಾಗಿ ಆಧ್ಯಾತ್ಮಿಕ ಪ್ರಯತ್ನವನ್ನೂ ಮಾಡೋಣ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜನರಲ್ಲಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ:  ಕಾಲಾಪಾನಿ ವಿವಾದ ಕಿಬ್ಬದಿಯ ಕೀಲು; ಮೊದಲು ಅದನ್ನು ಪರಿಹರಿಸಿಕೊಳ್ಳಿ

    ದಿನವೂ ಸಂಜೆ 5 ಗಂಟೆಗೆ ಹನುಮಾನ್ ಚಾಲೀಸ ಪಠಿಸೋದಕ್ಕೆ ಶುರುಮಾಡೋಣ. ಮುಕ್ತಾಯದಲ್ಲಿ ಮನೆಯಲ್ಲೇ ಶ್ರೀರಾಮನಿಗೆ ಆರತಿಯನ್ನೂ ಬೆಳಗೋಣ. ಆಗಸ್ಟ್‍ 4ರಂದು ಲಾಕ್‍ಡೌನ್ ಮುಕ್ತಾಯವಾಗಲಿದೆ. ಆಗಸ್ಟ್ 5ರಂದು ನಾವು ಶ್ರೀರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವನ್ನು ದೀಪಾವಳಿ ಹಬ್ಬದಂತೆ ಆಚರಿಸೋಣ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

    ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts