More

    ಕರೀನಾಗೆ ಶಾರೂಖ್ ಮನೆ, ಪ್ರಿಯಾಂಕಾ ಧ್ವನಿ, ಸೈಫ್ ಬ್ರೈನ್ ಬೇಕಂತೆ …

    ಮುಂಬೈ: ಯಾರ್ಯಾರಿಗೆ ಏನೇನು ಆಸೆಗಳು ಇರುತ್ತವೋ ಎಂದು ಹೇಳುವುದು ಕಷ್ಟ. ಅದರಲ್ಲೂ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಚಿತ್ರವಿಚಿತ್ರವಾದ ಆಸೆಗಳಿರುತ್ತವೆ. ನಿಮ್ಮ ಆಸೆಯೇನು ಮತ್ತು ನಿಮಗೇನು ಬೇಕು ಎಂದು ಕರೀನಾ ಕಪೂರ್​ ಅವರನ್ನು ಕೇಳಿದರೆ ಇಷ್ಟುದ್ಧ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ ಅವರು.

    ಇದನ್ನೂ ಓದಿ: ನಾಟಕ ಮಾಡ್ತಿದ್ದೀರಾ ಎಂದವರಿಗೆ ಅಕ್ಷಯ್ ಹೆಂಡತಿ ಕೊಟ್ಟ ಉತ್ತರ ಇದು …

    ಇತ್ತೀಚೆಗೆ, ಕರೀನಾ ಕಪೂರ್​ ಒಂದು ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ಸೆಲೆಬ್ರಿಟಿಗಳಿಂದ ನಿಮಗೆ ಇಷ್ಟವಾಗಿದ್ದನ್ನು ಕೇಳುವುದಕ್ಕೆ ಅವಕಾಶ ಕೊಟ್ಟರೆ, ಯಾರ್ಯಾರಿಂದ ಏನೆಲ್ಲ ಕೇಳಿ ಪಡೆಯುತ್ತೀರಿ ಎಂಬ ಪ್ರಶ್ನೆಯನ್ನು ಕರೀನಾ ಕಪೂರ್​ ಮುಂದಿಡಲಾಗಿತ್ತು. ಅದಕ್ಕೆ ಸರಿಯಾಗಿ ಒಂದಿಷ್ಟು ಬಾಲಿವುಡ್​ ಸೆಲೆಬ್ರಿಟಿಗಳ ಹೆಸರುಗಳನ್ನು ಸಹ ನೀಡಲಾಗಿತ್ತು. ಇದಕ್ಕೆ ಕರೀನಾ ಕಪೂರ್​ ನೀಡಿರುವ ಉತ್ತರ ಬಹಳ ಮಜವಾಗಿದೆ.

    ಬಾಲಿವುಡ್​ ನಟ ಶಾರೂಖ್​ ಖಾನ್​ ಅವರಿಂದ ಏನು ಪಡೆಯುವುದಕ್ಕೆ ಬಯಸುತ್ತೀರಿ ಎಂಬ ಪ್ರಶ್ನೆಗೆ, ಅವರ ಲಂಡನ್​ನ ಮನೆ ಎಂದು ಕರೀನಾ ಉತ್ತರಿಸಿದ್ದಾರೆ. ಅದೇ ರೀತಿ ಪ್ರಿಯಾಂಕಾ ಚೋಪ್ರಾ ಅವರಿಂದ ಧ್ವನಿ, ದೀಪಿಕಾರಿಂದ ಸ್ಮೈಲ್​, ಸಲ್ಮಾನ್​ ಖಾನ್​ ಅವರಿಂದ ಅಭಿಮಾನಿಗಳು, ಆಲಿಯಾ ಭಟ್​ ಅವರಿಂದ ಪ್ರತಿಭೆ ಪಡೆಯುವುದಕ್ಕೆ ತನಿಗಷ್ಟ ಎಂದು ಕರೀನಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ಗೋವಾ ಸರ್ಕಾರ

    ಇನ್ನು, ಪತಿ ಸೈಫ್​ ಅಲಿ ಖಾನ್​ ಅವರಿಂದ ಏನು ಪಡೆಯಲು ಬಯಸುತ್ತೀರಿ ಎಂಬ ಪ್ರಶ್ನೆಗೆ, ಅವರ ಬ್ರೈನ್​ ಎಂಬ ಉತ್ತರ ಕರೀನಾ ಅವರಿಂದ ಬಂದಿದೆ. ಈ ಕುರಿತು ಮಾತನಾಡಿರುವ ಅವರು, ಸೈಫ್​ ಪ್ರತಿಭಾವಂತರಷ್ಟೇ ಅಲ್ಲ, ಬುದ್ಧಿವಂತ ಸಹ. ಹಾಗಾಗಿ, ಅವರಿಂದ ಬ್ರೈನ್ ಪಡೆಯುವ ಆಸೆ ಎಂದು ಕರೀನಾ ಹೇಳಿಕೊಂಡಿದ್ದಾರೆ.

    ಕೌನ್ ಬನೇಗಾ ಕರೋಡಪತಿ 13 ನೇ ಸೀಜನ್ ತಯಾರಿ ಆರಂಭಿಸಿದ ಅಮಿತಾಭ್ ಬಚ್ಚನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts