More

    ‘ಪುಷ್ಪ’ ಟ್ರೈಲರ್ ನೋಡಿದ ‘ಕನ್ನಡಿಗರು’ ಮತ್ತೆ ‘ರಶ್ಮಿಕಾ ಮಂದಣ್ಣ’ ಮೇಲೆ ಗರಂ! ಕಾರಣ?

    ಬೆಂಗಳೂರು:ಪುಷ್ಪಚಿತ್ರದ ಟ್ರೈಲರ್ ಡಿ.6 ರಂದು ಬಿಡುಗಡೆಯಾದ ಕ್ಷಣದಿಂದ ಹಲವಾರು ಒಳ್ಳೆಯ ಕಾರಣಗಳಿಗೆ ಸುದ್ದಿಯಲ್ಲಿದೆ. ಸ್ಟೈಲಿಶ್ ಸ್ಟಾರ ನಟ ಅಲ್ಲು ಅರ್ಜುನ್ ರಗಡ್ ಲುಕ್ ನಿಂದ ಹಿಡಿದು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಳ ಹಾಟ್ ಲುಕ್​ನ ವರೆಗೆ ಪುಷ್ಪಚಿತ್ರದ ಟ್ರೈಲರ್ ಬಹುತೇಕ ಎಲ್ಲರ ಮನಸ್ಸು ಗೆದ್ದಿದೆ. ಇನ್ನು, ಸಿನಿಮಾ ಟ್ರೈಲರ್​ನಲ್ಲಿ ನಟರಾದ ಫಹಾದ್ ಫಾಸಿಲ್, ಕಮಿಡಿಯನ್ ಸುನಿಲ್, ಡಾಲಿ ಧನಂಜಯ್ ಅವರ ಲುಕ್​ಗಳು ಒಂದೆರಡು ಮೂರು ಕಡೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಂದ ಸೂಪರ್ ಎನಿಸಿಕೊಂಡಿವೆ. ಆದರೆ, ಸದ್ಯ ಒಂದು ನೆಗೆಟಿವ್ ಕಾರಣಕ್ಕೆಂದು ಪುಷ್ಪಸಿನಿಮಾ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ಹೌದು, ಈ ಪ್ಯಾನ್ ಇಂಡಿಯಾ ಚಿತ್ರದ ಕನ್ನಡ ಟ್ರೈಲರ್ ನೋಡಿದ ಕನ್ನಡಿಗರು ನಟಿ ರಶ್ಮಿಕಾ ಮಂದಣ್ಣ ಮೇಲೆ ಮತ್ತೆ ಗರಂ ಆಗಿದ್ದಾರೆ.
    ಈಗಾಗಲೇ, ನಟಿ ರಶ್ಮಿಕಾ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಸಂಪೂರ್ಣ ನಿಲ್ಲಿಸಿದಂತಾಗಿದೆ. ಆದರೆ, ಅವರು ಕನ್ನಡಿಗರೆ ಅಲ್ವಾ. ಮತ್ತೆ ಬೇರೆ ಭಾಷೆಗಳಲ್ಲಿ ನಟಿಸುವುದು ಆರಂಭಿಸಿದ ಕೂಡಲೆ ಮಾತೃ ಭಾಷೆ ಕನ್ನಡವನ್ನೆ ಮಾರೆತರಾ? ‘ಪುಷ್ಪಚಿತ್ರ ಮೂಲತಃ ತೆಲುಗಿನದ್ದಾಗಿದ್ದು, ಆ ಭಾಷೆಯ ಟ್ರೈಲರ್​ನಲ್ಲಿ ನಟಿ ರಶ್ಮಿಕಾ ತಮ್ಮ ಶ್ರೀವಲ್ಲಿ ಪಾತ್ರಕ್ಕೆ ಅವರದ್ದೆ ಧ್ವನಿಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಆದರೆ, ಚಿತ್ರದ ಕನ್ನಡ ಟ್ರೈಲರ್​ನಲ್ಲಿ ರಶ್ಮಿಕಾ ಅವರ ಪಾತ್ರಕ್ಕೆ ಬೇರೆಯವರ ಧ್ವನಿಯಲ್ಲಿ ಡಬ್ಬಿಂಗ್ ನೀಡಲಾಗಿದೆ. ಈ ವಿಚಾರ ಗಮನಿಸಿದ ಕನ್ನಡಿಗರು, ಸಿನಿಪ್ರಿಯರು, ರಶ್ಮಿಕಾ ಅಭಿಮಾನಿಗಳಿಗೆ ಬೇಸರ ತಂದಿದೆ. ಮಾತೃ ಭಾಷೆ ಕ್ನನಡವನ್ನು ಮರೆತರಾ ನಟಿ ರಶ್ಮಿಕಾ ಮಂದಣ್ಣ ಎಂದು ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸ ತೊಡಗಿದ್ದಾರೆ.

    'ಪುಷ್ಪ' ಟ್ರೈಲರ್ ನೋಡಿದ 'ಕನ್ನಡಿಗರು' ಮತ್ತೆ 'ರಶ್ಮಿಕಾ ಮಂದಣ್ಣ' ಮೇಲೆ ಗರಂ! ಕಾರಣ?

    ಹೀಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಯಾಕೆ ಕನ್ನಡ ಭಾಷೆಗೆ ಡಬ್ಬಿಂಗ್ ನೀಡಿಲ್ಲ ಎಂಬುದಕ್ಕೆ ಮಾತ್ರ ಯಾರ ಬಳಿಯೂ ಉತ್ತರವಿಲ್ಲ. ಅಂದಹಾಗೆ, ಡಬ್ಬಿಂಗ್ ಸಿನಿಮಾಗಳಲ್ಲಿ ಮೂಲ ಸಿನಿಮಾಗೆ ಮಾತ್ರ ನಟ ಮತ್ತು ನಟಿಯರು ತಮ್ಮ ಪಾತ್ರಗಳಿಗೆ ಡಬ್ಬಿಂಗ್ ನೀಡುತ್ತಾರೆ. ಉಳಿದ ಭಾಷೆಗಳಲ್ಲಿ ಡಬ್ಬಿಂಗ್ ಕಲಾವಿದರಿಂದ ಧ್ವನಿ ನೀಡಲಾಗುತ್ತದೆ. ಇದಕ್ಕೆ ಕಾರಣ ಚಿತ್ರದ ನಿರ್ಮಾಪಕರು, ನಿರ್ದೇಶಕರು. ಡಬ್ಬಿಂಗ್ ಖರ್ಚು ಉಳಿಸಲು ನಿರ್ದೇಶಕರು ಮತ್ತು ನಿರ್ಮಾಪಕರು ಮಾಡುವ ಕೆಲಸ ಇದು. ‘ಪುಷ್ಪವಿಚಾರದಲ್ಲೂ ಹೀಗೆ ಆಗಿದೆ. ಹಾಗಾಗಿ, ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ತಪ್ಪು ಇಲ್ಲ ಎಂದೇ ಹೇಳುಬೇಕು. ‘ಪುಷ್ಪಭಾಗ 1′ ಡಿ.17 ರಂದು ಬಿಡುಗಡೆಯಾಗಲಿದ್ದು ಸಿನಿಮಾ ಟ್ರೈಲರ್ ಐದೂ ಭಾಷೆಗಳಲ್ಲಿ ಸೇರಿ ಒಟ್ಟು 30 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಟ್ರೈಲರ್ ನೋಡಿದ ಸಿನಿ ವಿಮರ್ಶಕರು ಚಿತ್ರ ಪಕ್ಕಾ ಸೂಪರ್ ಹಿಟ್ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts