More

    ಕೆನಡದ ನಯಾಗರ ಫಾಲ್ಸ್​ ಬಳಿ ಬಿಡುಗಡೆ ಆಗಲಿದೆ ಕನ್ನಡ ಸಿನಿಮಾದ ಟೀಸರ್​!

    ಬೆಂಗಳೂರು: ಸ್ಯಾಂಡಲ್​ವುಡ್​ನವರು ತಮ್ಮ ಸಿನಿಮಾದ ಟೀಸರ್​-ಟ್ರೇಲರ್​-ಸಾಂಗ್ ರಿಲೀಸ್ ಸಮಾರಂಭಗಳನ್ನು ವಿಭಿನ್ನವಾಗಿ ನಡೆಸುವುದು ಹೊಸದೇನಲ್ಲ. ಹಾಗೆಯೇ ವಿಶಿಷ್ಟವಾದ ಸ್ಥಳಗಳಲ್ಲಿಯೂ ಇಂಥದ್ದೇ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆಯುವುದು ಕೂಡ ಉಂಟು. ಇದೀಗ ಆ ಪ್ರಯತ್ನಕ್ಕೆ ರಾಜು ಜೇಮ್ಸ್ ಬಾಂಡ್ ಕೂಡ ಮುಂದಾಗಿದ್ದಾನೆ.

    ಅಂದರೆ ರಾಜು ಜೇಮ್ಸ್ ಬಾಂಡ್ ಕನ್ನಡ ಸಿನಿಮಾದ ಟೀಸರ್ ಕರ್ನಾಟಕದ ಹೊರಗೆ ಮಾತ್ರವಲ್ಲ, ಭಾರತದಿಂದ ಆಚೆಯೇ ಬಿಡುಗಡೆ ಆಗಲಿದೆ. ಅರ್ಥಾತ್, ಕೆನಡದ ನಯಾಗರ ಜಲಪಾತದ ಸಮೀಪ ಈ ಚಿತ್ರದ ಟೀಸರ್​ ರಿಲೀಸ್ ಆಗಲಿದೆ.

    ಇದನ್ನೂ ಓದಿ: ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಚಿತ್ರದ ನಾಯಕ ಗುರುನಂದನ್ ಕೆನಡದಿಂದಲೇ ಈ ಕುರಿತು ವಿಜಯವಾಣಿ ಜತೆ ಮಾತನಾಡಿದ್ದು, ಕೆನಡದಲ್ಲಿರುವ ಕನ್ನಡಿಗರ ಸಮ್ಮುಖದಲ್ಲಿ ನಯಾಗರ ಜಲಪಾತದ ಬಳಿ ರಾಜು ಜೇಮ್ಸ್ ಬಾಂಡ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿರುವುದಾಗಿ ಹೇಳಿದರು.

    ಇದನ್ನೂ ಓದಿ: ನಿನ್ನೆ ‘ಮೀಟ್​ ಮಾಡಣ ಇಲ್ಲ ಡೇಟ್ ಮಾಡಣ’, ಇಂದು ‘ನೋಡುತ.. ಸುಮ್ಮನೇ..’; ಮತ್ತೆ ಟಾಪ್​ಗೆ ಹೋದ ರಚಿತಾ ರಾಮ್​

    ಡಿ. 30 ತಮ್ಮ ಜನ್ಮದಿನವಾಗಿದ್ದು ಹಾಗೂ ಈ ಸಂದರ್ಭದಲ್ಲಿ ಕೆನಡದಲ್ಲಿ ಇರುವುದರಿಂದ ಇಲ್ಲಿಯೇ ಟೀಸರ್ ರಿಲೀಸ್ ಹಮ್ಮಿಕೊಳ್ಳಲಾಗಿದೆ. ಚಿತ್ರವನ್ನು ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಯಾವುದಕ್ಕೂ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
    ರೊಮ್ಯಾಂಟಿಕ್​ ಆ್ಯಕ್ಷನ್ ಕಾಮಿಡಿ ಆಗಿರುವ ಈ ಚಿತ್ರವನ್ನು ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದು, ಕಿರಣ್ ಭರ್ತೂರು ಮತ್ತು ಮಂಜುನಾಥ್ ವಿಶ್ವಕರ್ಮ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಗುರುನಂದನ್ ಜತೆ ಪೂಜಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅನೂಪ್​ ಸೀಳಿನ್ ಅವರ ಸಂಗೀತವಿದೆ.

    ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

    ಯಾವುದೇ ಪದವಿ ಕೊಡಲಿಲ್ಲ, ಹಣವನ್ನೂ ನೀಡಲಿಲ್ಲ; ಆದರೂ ಮಾಡುತ್ತಿದ್ದಾರೆ ಸ್ವಯಂಪ್ರಚಾರ: ಬೆಂಬಲಿಸಿದವರಿಗೆ ಉಪೇಂದ್ರ ಮೆಚ್ಚುಗೆ

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts