More

    ನನಗೆ ರಾಜಕೀಯ ಸೇರುವ ಯೋಚನೆ ಇಲ್ಲ: ಕಂಗನಾ ರಣಾವತ್​

    ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಗನಾ ರಣಾವತ್​ ಬೆಂಬಲಿಸಿದರೋ, ಆಗಿನಿಂದಲೇ ಅವರು ಭಾರತೀಯ ಜನತಾ ಪಕ್ಷ ಸೇರುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆ ನಂತರದ ಕೆಲವು ಬೆಳವಣಿಗೆಗಳು, ಕಂಗನಾ ಅವರ ಮುಂದಿನ ಗುರಿ ರಾಜಕೀಯ ಎಂಬುದನ್ನು ಪುಷ್ಟೀಕರಿಸಿತ್ತು.

    ಇದನ್ನೂ ಓದಿ: ಪುಟಾಣಿಗಳ ರಕ್ಷಣೆಗೆ ಧಾವಿಸಿದ ನಟ ಶಶಿಕುಮಾರ್

    ಆದರೆ, ಕಂಗನಾ ಮಾತ್ರ ಇದುವರೆಗೂ ಭಾರತೀಯ ಜನತಾ ಪಕ್ಷ ಸೇರಿಲ್ಲ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲೂ ಸೇರುವುದಿಲ್ಲವಂತೆ. ಅದಕ್ಕೆ ಕಾರಣ, ಅವರಿಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲವಂತೆ. ಹಾಗಂತ ಅವರೇ ಇತ್ತೀಚೆಗೆ ಟ್ವೀಟ್​ ಮಾಡಿಕೊಂಡಿದ್ದಾರೆ.

    ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಪೋರ್ಟ್​ ಮಾಡಿದೆ ಎಂಬ ಕಾರಣಕ್ಕೆ ನಾನು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹಲವರು ನಂಬಿದ್ದಾರೆ. ಗೊತ್ತಿಲ್ಲದಿದ್ದರೆ ಕೇಳಿ, ನನ್ನ ತಾತ 15 ವರ್ಷಗಳ ಕಾಲ ಕಾಂಗ್ರೆಸ್​ ಎಂ.ಎಲ್​.ಎ ಆಗಿದ್ದವರು. ಅಷ್ಟೇ ಅಲ್ಲ, ‘ಗ್ಯಾಂಗ್​ಸ್ಟರ್​’ ಚಿತ್ರದ ನಂತರ ಪ್ರೀತಿ ವರ್ಷ ನನಗೆ ಕಾಂಗ್ರೆಸ್​ನಿಂದ ಪ್ರತೀ ವರ್ಷ ನನಗೆ ಕಾಂಗ್ರೆಸ್​ ಸೇರುವುದಕ್ಕೆ ಆ ಪಕ್ಷದಿಂದ ಆಫರ್​ ಸಿಕ್ಕಿತ್ತು’ ಎಂದು ಕಂಗನಾ ಹೇಳಿದ್ದಾರೆ.

    ಇದನ್ನೂ ಓದಿ: ಸೈಫ್​ 50 ನೇ ವರ್ಷದ ಬರ್ತ್​​ಡೇಗೆ ಪತ್ನಿ ಕರೀನಾ ನೀಡಿದ ಉಡುಗೊರೆ ಇದು…

    ಇನ್ನು ‘ಮಣಿಕರ್ಣಿಕಾ’ ಚಿತ್ರದ ನಂತರ ಭಾರತೀಯ ಜನತಾ ಪಕ್ಷದಿಂದಲೂ ತಮಗೆ ಪಕ್ಷ ಸೇರುವ ಆಫರ್​ ಬಂದಿತ್ತು ಎಂದು ಹೇಳಿರುವ ಅವರು, ‘ನನಗೆ ನಟನೆಯ ಬಗ್ಗೆ ಹೆಚ್ಚು ಪ್ಯಾಶನ್​ ಇದೆಯೇ ಹೊರತು, ಯಾವತ್ತೂ ರಾಜಕೀಯ ಸೇರುವ ಯೋಚನೆ ನನಗೆ ಬಂದಿಲ್ಲ. ಹಾಗಾಗಿ ನಾನು ರಾಜಕೀಯ ಪಕ್ಷ ಸೇರುವುದಕ್ಕೆ ಇಷ್ಟೆಲ್ಲಾ ಮಾಡುತ್ತಿದ್ದೇನೆ ಎಂದು ಟ್ರೋಲ್​ ಮಾಡುತ್ತಿರುವವರಿಗೆ, ನಾನು ಯಾವುದೇ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

    ನೀವು ನನ್ನ ಧ್ವನಿಯಾಗಿದ್ದೀರಾ, ನಾನು ನಿಮ್ಮ ಧ್ವನಿಗೆ ಮುಖವಾಗಿದ್ದೇನೆ.. ಬೇಗ ಬನ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts