More

    ಪದವಿ ನಂತರ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ಕಡ್ಡಾಯವಾಗಿರಬೇಕು: ಕಂಗನಾ ರಣಾವತ್

    ಮುಂಬೈ: ಭಾರತದಲ್ಲಿ ಪದವಿ ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ಕಡ್ಡಾಯವಾಗಿರಬೇಕು ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

    ಪದವಿ ನಂತರ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ಕಡ್ಡಾಯವಾಗಿರಬೇಕು: ಕಂಗನಾ ರಣಾವತ್

    ಮಾಧ್ಯಮದವರೊಂದಿಗೆ ಮಾತನಾಡಿದ ನಟಿ, ಭಾರತದಲ್ಲಿ ಪದವಿ ಪಡೆದ ನಂತರ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸಬೇಕು. ಪದವಿ ಶಿಕ್ಷಣ ನಂತರ ಪ್ರತಿಯೊಬ್ಬರಿಗೂ ಮಿಲಿಟರಿ ತರಬೇತಿಯನ್ನು ದೇಶದಲ್ಲಿ ಕಡ್ಡಾಯಗೊಳಿಸಿದರೆ ನಾವು ಈ ಸೋಮಾರಿ ಮತ್ತು ಬೇಜವಾಬ್ದಾರಿಯಿಂದ ಮುಕ್ತರಾಗುತ್ತೇವೆ. ಮಕ್ಕಳಲ್ಲಿ ಶಿಸ್ತನ್ನು ಬೆಳೆಸುತ್ತದೆ ಎಂದು ಹೇಳುತ್ತಾ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವಂತೆಯೂ ಮನವಿ ಮಾಡಿದ್ದಾರೆ.

    ಪದವಿ ನಂತರ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ಕಡ್ಡಾಯವಾಗಿರಬೇಕು: ಕಂಗನಾ ರಣಾವತ್

    ಬಹು ಬೇಡಿಕೆಯ ನಟಿ ಕಂಗನಾ ರಣಾವತ್. ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಸದಾ ಸಕ್ರಿಯರಾಗಿರುತ್ತಾರೆ. ಅವರ ಸ್ಟೈಲಿಶ್ ಲುಕ್ ಎಲ್ಲರಿಗೂ ಇಷ್ಟ ಆಗುತ್ತೆ.

    ವಿಶ್ವಕಪ್ ಪೂರ್ವ ಶೋಗಾಗಿ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ ಆಗಮಿಸಿದ ನಟಿ ಕಂಗನಾ, ಏರ್​ಫೋರ್ಸ್​​ ಸಮವಸ್ತ್ರವನ್ನು ಧರಿಸಿ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮುಖೇನ ಅನೇಕರ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ರೀತಿ ಬರಲು ಕಾರಣವೇನು? ಇದರ ಹಿಂದಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

    ತಮ್ಮ ಮುಂದಿನ ಸಿನಿಮಾ ‘ತೇಜಸ್’ ಪ್ರಚಾರಕ್ಕಾಗಿ ಕಂಗನಾ ಏರ್‌ಫೋರ್ಸ್ ಸಮವಸ್ತ್ರದಲ್ಲಿ ಆಗಮಿಸಿದರು. ನಿರ್ದೇಶಕ ಸರ್ವೇಶ್ ಮೇವಾರ ನಿರ್ದೇಶಿಸಿದ ಈ ಚಿತ್ರದಲ್ಲಿ ಏರ್​ಪೋರ್ಸ್​ ಪೈಲೆಟ್​​ ತೇಜಸ್​ ಗಿಲ್​ ಅವರ ಪಾತ್ರದಲ್ಲಿ ನಟಿ ಕಂಗನಾ ಅಭಿನಯಿಸಿದ್ದು, ವಿಶೇಷ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹಾಜರುಪಡಿಸಲು ಚಿತ್ರತಂಡ ಸಿದ್ಧಗೊಂಡಿದೆ.

    ಪದವಿ ನಂತರ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ಕಡ್ಡಾಯವಾಗಿರಬೇಕು: ಕಂಗನಾ ರಣಾವತ್

    ಕಂಗನಾ ರಣಾವತ್ ಮುಂದಿನ ಸಿನಿಮಾ ಮಿಲಿಟರಿ ಕಥೆಯಾಧಾರಿತ ತೇಜಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಭಾರತೀಯ ವಾಯುಪಡೆ ದಿನದಂದು ಅಕ್ಟೋಬರ್ 8 ರಂದು ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಕಂಗನಾ ಅವರು ವಾಯುಪಡೆಯ ಪೈಲಟ್ ತೇಜಸ್ ಗಿಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕರ ವಶದಲ್ಲಿರುವ ಭಾರತೀಯ ಇಂಜಿನಿಯರ್-ಆಗಿರುವ ಗೂಢಚಾರರನ್ನು ರಕ್ಷಿಸುವ ಕಥೆ ಈ ಸಿನಿಮಾದಲ್ಲಿದೆ. ಸರ್ವೇಶ್ ಮೇವಾರ ಬರೆದು ನಿರ್ದೇಶಿಸಿರುವ ತೇಜಸ್ ಅಕ್ಟೋಬರ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

    INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts