More

    ನಿಮ್ಮ ಮಗಳಾಗಿದ್ರೆ ಹೀಗೇ ಮಾತಾಡ್ತಿದ್ರಾ? ಜಯಾಗೆ ಕಂಗನಾ ಪ್ರಶ್ನೆ

    ಮನಾಲಿ: ತಮ್ಮ ವಿರುದ್ಧ ಮಾತನಾಡುವವರಿಗೆ ತಕ್ಕ ಉತ್ತರವನ್ನು ಬಾಲಿವುಡ್​ ನಟಿ ಕಂಗನಾ ರಣಾವತ್​ ಕಾಲದಿಂದ ಕಾಲಕ್ಕೆ ಕೊಡುತ್ತಲೇ ಬಂದಿದ್ದಾರೆ. ಇದೀಗ ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್​ ಅವರು ತಮ್ಮ ಬಗ್ಗೆ ಮಾತನಾಡಿದ ಕೆಲವೇ ಸಮಯದಲ್ಲಿ ಕಂಗನಾ, ಟ್ವಿಟರ್​ ಮೂಲಕ ಅವರಿಗೆ ಉತ್ತರವನ್ನು ಕೊಟ್ಟಿದ್ದಾರೆ.

    ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಿಎಂ ಬಿಎಸ್​​ವೈ ಭೂಮಿ ಪೂಜೆ

    ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್​ ಅವರು ಸಂಸತ್​ ಅಧಿವೇಶನದಲ್ಲಿ ಮಂಗಳವಾರ ಬೆಳಿಗ್ಗೆ ಬಾಲಿವುಡ್​ನಲ್ಲಾಗುತ್ತಿರುವ ಕೆಲವು ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವು ಮತ್ತು ಡ್ರಗ್ಸ್​ ಮಾಫಿಯಾದಿಂದಾಗಿ, ಹಲವರು ಬಾಲಿವುಡ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಕೆಟ್ಟದಾಗಿ ಮಾತನಾಡುವುದನ್ನು ಖಂಡಿದ್ದಾರೆ.

    ಇತ್ತೀಚೆಗಷ್ಟೇ ನಟಿ ಕಂಗನಾ ರಣಾವತ್​ ಅವರು ಬಾಲಿವುಡ್​ ಗಟಾರವಾಗುತ್ತಿದೆ ಮತ್ತು ಚಿತ್ರರಂಗದಲ್ಲಿರುವ ಶೇ 99ರಷ್ಟು ಜನ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು.

    ಈ ಕುರಿತು ರಾಜ್ಯಸಭೆಯ ಜೀರೋ ಹವರ್​ನಲ್ಲಿ ಮಾತನಾಡಿರುವ ಜಯಾ ಬಚ್ಚನ್​, ‘ಸೋಷಿಯಲ್​ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು’ ಎಂದು ಕಂಗನಾ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದಾರೆ.

    ಇದನ್ನೂ ಓದಿ: ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪಲ್ವಾ? ಜಯಾ ಬಚ್ಚನ್​ ಪ್ರಶ್ನೆ

    ಈ ಕುರಿತು ಇನ್ನಷ್ಟು ಮಾತನಾಡಿರುವ ಕಂಗನಾ, ‘ನಿಮ್ಮ ಮಗಳು ಶ್ವೇತಾಗೆ ಹೊಡೆದು ಡ್ರಗ್ಸ್​ ಕೊಟ್ಟಿದ್ದರೆ ನೀವು ಇದೇ ರೀತಿ ಮಾತನಾಡುತ್ತಿದ್ದಿರಾ ಜಯಾಜಿ? ಒಂದು ಪಕ್ಷ ಅಭಿಷೇಕ್​ಗೆ ಯಾರಾದರೂ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರೆ ನೋಡಿಕೊಂಡು ಸುಮ್ಮನಾಗುತ್ತಿದ್ದಿರಾ. ಒಂದು ಪಕ್ಷ ಇದರಿಂದ ಅವರು ನೇಣು ಬಿಗಿದುಕೊಂಡಿದ್ದರೆ, ಏನೂ ಆಗಿಲ್ಲ ಎನ್ನುವಂತೆ ಮಾತನಾಡುತ್ತಿದ್ದಿರಾ? ನಮ್ಮ ಬಗ್ಗೆಯೂ ಸ್ವಲ್ಪ ಸಹಾನುಭೂತಿ ಇರಲಿ’ ಎಂದು ಕಂಗನಾ ಹೇಳಿದ್ದಾರೆ.

    ಬಾಲಿವುಡ್​ ಟಾಪ್​ ಸಿನಿಮಾಗಳ ಬಿಡುಗಡೆಗೆ ಮುಳುವಾಯ್ತು ಐಪಿಎಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts