More

    ಕ್ಯಾಮ್ಸ್ ಶಶಿಕುಮಾರ್ ಹತ್ಯೆಗೆ ಸುಪಾರಿ: ಕಾಡಿನಲ್ಲಿ ಅಡಗಿಕುಳಿತಿದ್ದ ಆರೋಪಿ ಆರ್​​​ಟಿಐ ರವಿ!

    ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದ ಆರೋಪ ಎದುರಿಸುತ್ತಿದ್ದು ನಾಪತ್ತೆಯಾಗಿದ್ದ ಆರ್​ಟಿಐ ರವಿಯನ್ನು ಬಂಧಿಸುವಲ್ಲಿ ನಗರದ ಜಾಲಹಳ್ಳಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 40 ದಿನಗಳ ಕಾಲ ಆರೋಪಿ ರವಿಗಾಗಿ ಹುಡುಕಾಟ ನಡೆಸಿದ್ದು, ಇದೀಗ ಚಾಮರಾಜನಗರ ಜಿಲ್ಲೆಯ ಕಾಡಿನಲ್ಲಿ ಅಡಗಿದ್ದ ರವಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಸಂಬಂಧವಾಗಿ, ರವಿ ಜೊತೆ ಇದ್ದ ಐವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಜುಲೈ 29 ರ ರಾತ್ರಿ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಹಲ್ಲೆ ನಡೆದಿತ್ತು. ಶಶಿಕುಮಾರ್ ಮನೆ ಬಳಿ ಅವರು ಕಾರಿನಿಂದ ಇಳಿದ ತಕ್ಷಣ ಹತ್ಯೆಯ ಉದ್ದೇಶದಿಂದ ಆರೋಪಿಗಳು ಅಟ್ಯಾಕ್ ಮಾಡಿದ್ದರು. ಅಟ್ಯಾಕ್ ಮಾಡುತ್ತಿದ್ದಂತೆ ಶಶಿಕುಮಾರ್​ ಲೈಸೆನ್ಸೆಡ್​ ರಿವಾಲ್ವರ್ ತೆಗೆದು ಒಂದು ಫೈರ್ ಮಾಡಿದ್ದರು. ಆಗ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಬಾಲಿವುಡ್​ ನಟ ಅಕ್ಷಯ್ ಕುಮಾರ್​ ತಾಯಿ ನಿಧನ: ಅಮ್ಮನ ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿದ ನಟ

    ಪ್ರಕರಣದ ಬೆನ್ನತ್ತಿದ ಜಾಲಹಳ್ಳಿ ಪೊಲೀಸರು ಆಗಸ್ಟ್ 3 ರಂದು ಐವರು ಆರೋಪಿಗಳನ್ನ ಬಂಧಿಸಿದ್ದರು, ಆ ವೇಳೆ ಬಂಧಿತ ಆರೋಪಿಗಳು ಸಾಮಾಜಿಕ ಕಾರ್ಯಕರ್ತ ರವಿ, ಶಶಿಕುಮಾರ್ ಕೊಲೆಗೆ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಶಶಿಕುಮಾರ್ ಹತ್ಯೆ ಮಾಡಿದ್ರೆ ಕ್ಯಾಮ್ಸ್​​ನಲ್ಲಿ ಉನ್ನತ ಹುದ್ದೆ ಸಿಗುತ್ತೆ ಅನ್ನೋ ಕಾರಣಕ್ಕೆ ಹತ್ಯೆಗೆ ಸುಪಾರಿ ನೀಡಿದ್ದಾಗಿ ತಿಳಿಸಿದ್ದರು. ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ರವಿ ಶೋಧ ಕಾರ್ಯ ನಡೆದಿತ್ತು.

    ಜಾಲಹಳ್ಳಿ ಪೊಲೀಸರು, ಸದ್ಯ ವಶಕ್ಕೆ ಸಿಕ್ಕಿರುವ, ಆರೋಪಿ ರವಿಯ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಇದುವರೆಗೆ ರವಿ ಸೇರಿದಂತೆ 11 ಜನ ಆರೋಪಿಗಳನ್ನು ಬಂಧಿಸಲಾಗಿದೆ.

    ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು

    ಸ್ತ್ರೀಯರ ಗರ್ಭಾಶಯದ ಆರೋಗ್ಯಕ್ಕೆ ಪೂರಕ; ಪುರುಷರಿಗೂ ಉಪಯುಕ್ತ – ‘ವಿಸ್ತೃತ ಪಾದಾಸನ’

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts