More

    ದೆಹಲಿ ಮದ್ಯನೀತಿ ಹಗರಣದಲ್ಲಿ ಮತ್ತೊಂಬರನ್ನು ಬಂಧಿಸಿದ ಇಡಿ!

    ನವದೆಹಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಎಪಿಗೆ ನಿಧಿಯನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಚನ್ಪ್ರೀತ್ ಸಿಂಗ್ ಅವರನ್ನು ಬಂಧಿಸಿದೆ ಎಂದು ಸೋಮವಾರ ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

    ಇದನ್ನೂ ಓದಿ: ದೇವೇಗೌಡರೇ ಈ ಇಳಿ ವಯಸ್ಸಿನಲ್ಲಿ ಈ ಶರಣಾಗತಿಯ ಸ್ಥಿತಿ ಏಕೆ ಬಂತು? ಸಿಎಂ ಸಿದ್ದರಾಮಯ್ಯ

    ಏಪ್ರಿಲ್ 12 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸಿಂಗ್ ಅವರನ್ನು ಬಂಧಿಸಲಾಗಿದೆ. ಏ.13 ಶನಿವಾರ ರಂದು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ಏಪ್ರಿಲ್​ 18ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

    ಈ ಮೂಲಕ ದಿಲ್ಲಿ ಲಿಕ್ಕರ್ ಹಗರಣದಲ್ಲಿ ಬಂಧಿಸಿದವರ ಸಂಖ್ಯೆ 17ಕ್ಕೆ ಏರಿದೆ. ಚನ್​ಪ್ರೀತ್ ಸಿಂಗ್ ಅವರನ್ನು ಈ ಹಿಂದೆ ಕೂಡ ಇದೇ ಪ್ರಕರಣದಲ್ಲಿ ಸಿಬಿಐ ಬಂಧನ ಮಾಡಿತ್ತು.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅವರ ಪಕ್ಷದ ಸಹೋದ್ಯೋಗಿ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಆರ್‌ಎಸ್ ನಾಯಕಿ ಕೆ. ಕವಿತಾ ಮತ್ತು ಹಲವು ಮದ್ಯದ ಉದ್ಯಮಿಗಳು ಮತ್ತು ಇತರರನ್ನು ಬಂಧಿಸಿದೆ.

    2022ರ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ, ಸಮೀಕ್ಷೆ ಸೇರಿದಂತೆ ಇನ್ನಿತರೆ ಕೆಲಸ ಮಾಡುತ್ತಿದ್ದವರಿಗೆ ಚನ್‌ಪ್ರೀತ್ ಸಿಂಗ್ ಹಣ ನೀಡುವ ಕೆಲಸವನ್ನು ನಿರ್ವಹಿಸಿದ್ದರು ಎಂದು ದಾಖಲೆ ಸಮೇತ ಇಡಿ ನ್ಯಾಯಾಲಯಕ್ಕೆ ಹೇಳಿತ್ತು ಎಂದು ವರದಿಯಾಗಿದೆ.

    ಲೋಕಸಮರ: ಚುನಾವಣಾ ಆಯೋಗದಿಂದ ಈವರೆಗೆ ಒಟ್ಟು 4,650 ರೂ. ಕೋಟಿಗೂ ಅಧಿಕ ನಗದು, ವಸ್ತುಗಳು ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts