More

    ತಾಲೂಕು ಕೇಂದ್ರಗಳಲ್ಲಿ ನಡೆಯಲಿ ರಂಗಭೂಮಿ ಚಟುವಟಿಕೆ; ರಂಗಭೂಮಿ ಮಿಮಿಕ್ರಿ, ಹಾಸ್ಯಕಲಾವಿದ ಬೂದಗುಂಪಿ ಹುಸೇನ್‌ಸಾಬ್ ಆಶಯ

    ಕಂಪ್ಲಿ: ಕನಿಷ್ಠ ತಾಲೂಕು ಕೇಂದ್ರಗಳಲ್ಲಾದರೂ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಇಲ್ಲಿನ ರಂಗಭೂಮಿ ಮಿಮಿಕ್ರಿ, ಹಾಸ್ಯಕಲಾವಿದ ಬೂದಗುಂಪಿ ಹುಸೇನ್‌ಸಾಬ್ ಹೇಳಿದರು.

    ಇಲ್ಲಿನ ಗಂಗಾಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಂಗಕಲೆ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ರಂಗಭೂಮಿಗಾಗಿ ಜೀವನ ಸವೆಸಿದವರನ್ನು ಗುರುತಿಸಿ ಸರ್ಕಾರ ಗೌರವ, ಪ್ರಶಸಿ , ಸೌಲಭ್ಯಗಳನ್ನು ಒದಗಿಸುವ ಮೂಲಕ ಯುವಪೀಳಿಗೆಯನ್ನು ರಂಗಭೂಮಿಯತ್ತ ಆಕರ್ಷಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಪ್ರಾಥಮಿಕ ಶಾಲಾ ಪಠ್ಯದಲ್ಲಿ ರಂಗಭೂಮಿ ಕಲೆ ಪರಿಚಯಿಸಬೇಕು ಎಂದರು.

    ರಂಗಭೂಮಿ ಹಾಸ್ಯ ಹಾಗೂ ಮಿಮಿಕ್ರಿ ಕಲಾವಿದ ಬೂದಗುಂಪಿ ಹುಸೇನ್‌ಸಾಬ್, ಬಯಲಾಟ ಕಲಾವಿದ ವಾಲ್ಮೀಕಿ ಈರಣ್ಣ ಇವರನ್ನು ಗೌರವಿಸಲಾಯಿತು. ಪ್ರಮುಖರಾದ ಕೆ.ಮೆಹಬೂಬ್, ಎಲಿಗಾರ ವೆಂಕಟರೆಡ್ಡಿ, ವಿಶ್ವನಾಥ, ಕೊಟ್ರೇಶ್, ಮಾರುತಿ ಚಿತ್ರಗಾರ್, ನಾರಾಯಣ ಬೂಸಾರೆ, ರಾಜಣ್ಣ ಬೂಸಾರೆ, ವಾಸು ಬೂಸಾರೆ, ವೆಂಕಟೇಶ್ ಚಿತ್ರಗಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts