More

    ಕಂಪ್ಲಿ ಸಕ್ಕರೆ ಕಾರ್ಖಾನೆ ಜಮೀನು ಬೇರೆ ಉದ್ದೇಶಕ್ಕೆ ಬಳಸಲ್ಲ: ಸಚಿವ ಶ್ರೀರಾಮುಲು ಹೇಳಿಕೆ

    ಕಂಪ್ಲಿ: ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆ ಮರು ಆರಂಭದ ಕಾಮಗಾರಿ ಸ್ಥಳ್ಕಕೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, 1995-96ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಟೆಂಡರ್ ಮೂಲಕ ಮಾರಾಟ ಮಾಡಲಾಯಿತು. 1999ರ ಮಾ.5ರಂದು ಸುಂದರಿ ಶುಗರ್ಸ್ ಹೆಸರಿಗೆ ನೋಂದಣಿಯಾಯಿತು. ಸಹಕಾರಿ ಕಾಯ್ದೆಯಡಿ ಕ್ಯಾಪಿಟಲ್ ಗೇನ್ ಕಟ್ಟಿಲ್ಲವೆಂದು ಆದಾಯ ತೆರಿಗೆ ಇಲಾಖೆ ಕೋರ್ಟ್ ಮೆಟ್ಟಿಲೇರಿತ್ತು. ಕಂಪನಿ 41.26 ಲಕ್ಷ ಹಾಗೂ 10 ಲಕ್ಷ ದಂಡ ಸೇರಿ 51.26 ಲಕ್ಷ ರೂ. ಇಲಾಖೆಗೆ ಪಾವತಿಸಿ, ನ್ಯಾಯಾಲಯ ಮೂಲಕವೇ ದಾಖಲೆಗಳನ್ನು ಅಧಿಕೃತವಾಗಿ ಪಡೆದುಕೊಂಡಿದೆ. ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ 176 ಎಕರೆ ಜಮೀನನ್ನು ಸಕ್ಕರೆ ಕಾರ್ಖಾನೆಗಾಗಿಯೇ ಬಳಸಲಾಗುವುದು. ಕಾರ್ಖಾನೆಗೆ ಸಂಬಂಧಿಸಿದ ಆರೋಪಗಳನ್ನು ಯಾರೂ ನಂಬಬಾರದು. ಅನುಮಾನವಿದ್ದರೆ ಆರ್‌ಟಿಐ ಮೂಲಕ ದಾಖಲೆ ಪಡೆದುಕೊಳ್ಳಬಹುದು ಎಂದು ರಾಮುಲು ತಿಳಿಸಿದರು.

    ಸಕ್ಕರೆ ಕಾರ್ಖಾನೆಯು ಸುಂದರಿ ಶುಗರ್ಸ್ ಲಿಮಿಟೆಡ್ ಅಡಿಯಲ್ಲಿ ಬಿ.ಶ್ರೀರಾಮುಲು ಮತ್ತು ಅಬ್ದುಲ್ ಅಜೀಜ್ ಗುಜರಿ ಪಾಲುದಾರಿಕೆಯಲ್ಲಿ ಆರಂಭವಾಗಲಿದೆ. ಕಂಪ್ಲಿ ಕಮಲಾಪುರ, ಸಿರಗುಪ್ಪ ಭಾಗಗಳಲ್ಲಿ ಬೆಳೆಯುವ ಕಬ್ಬು ಸುಂದರಿ ಸಕ್ಕರೆ ಕಾರ್ಖಾನೆಗೆ ಸಮೃದ್ಧವಾಗಿ ದೊರಕಲಿದೆ ಎಂದರು.

    ವಿಧಾನಪರಿಷತ್‌ನಲ್ಲಿ ಆದ ತಳ್ಳಾಟ, ಗಲಾಟೆಯಿಂದ ಮೇಲ್ಮನೆಯ ಘನತೆ ಗೌರವ ಮತ್ತು ಗಂಭೀರತೆ ಹಾಳಾಗಿದ್ದು, ಮನಸ್ಸಿಗೆ ನೋವಾಗಿದೆ ಎಂದರು. ಸೈಟ್ ಇನ್‌ಚಾರ್ಜ್ ಬಿ.ಅಬ್ದುಲ್ಲಾ ಶೇಕ್, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ವಿ.ಎಲ್.ಬಾಬು, ಎನ್. ಪುರುಷೋತ್ತಮ, ಟಿ.ರಬೀಯಾ, ಕೊಡಿದಲ ರಾಜು, ರಾಜು ಜೈನ್, ಹರ್ಷಿತ್, ಕಿಶೋರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts