More

    ಸಂಸ್ಕೃತದಿಂದ ಪರಂಪರೆ ಅರಿಯಲು ಸಾಧ್ಯ

    ಕಂಪ್ಲಿ: ಆಧುನಿಕ ಜೀವನದಲ್ಲಿ ಸಂಸ್ಕೃತದ ಪಾತ್ರ ಮಹತ್ವದು. ಪ್ರಾಚೀನ ಸಂಸ್ಕೃತಿಗಳ ಅರ್ಥೈಸಿಕೊಳ್ಳಲು ಸಂಸ್ಕೃತ ಜ್ಞಾನ ಅವಶ್ಯಕ ಎಂದು ಬಳ್ಳಾರಿಯ ಉಜ್ಜಿನಿ ಶ್ರೀ ಸಿದ್ದೇಶ್ವರ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಹಿರೇಮಠ ಹೇಳಿದರು.

    ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಹಮ್ಮಿಕೊಂಡಿದ್ದ ಲಿಂ.ಓದ್ಸೋ ಜಡೆಮ್ಮನವರ ಸ್ಮರಣಾರ್ಥ 216ನೇ ಶಿವಾನುಭವದಲ್ಲಿ ಪ್ರವಚನ ನೀಡಿದರು. ಸಂಸ್ಕೃತ ಭಾಷೆ ಮೇಲೆ ಹಿಡಿತ ಸಾಧಿಸುವಲ್ಲಿ ಯುವ ಪೀಳಿಗೆ ಆಸಕ್ತಿ ತೋರಬೇಕಿದೆ. ಸಂಸ್ಕೃತದಿಂದ ಭಾರತೀಯ ಪ್ರಾಚೀನ ಪರಂಪರೆ, ಇತಿಹಾಸ, ಧಾರ್ಮಿಕ, ಆಧ್ಯಾತ್ಮಿಕ ಸೇರಿ ನಾನಾ ಕ್ಷೇತ್ರಗಳಲ್ಲಿನ ಸಾರ ಅರಿಯಲು ಸಾಧ್ಯ ಎಂದು ಹೇಳಿದರು. ಜಾಲಹಳ್ಳಿ ಮಠದ ಪಟ್ಟದದೇವರಾದ ಶ್ರೀ ಕಿರಣ್ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಕೆ.ಎಂ.ಚಂದ್ರಶೇಖರಶಾಸ್ತ್ರಿ, ಎಚ್.ಎಂ.ಜಗದೀಶ್, ಯೋಗರಾಜ್, ಮೃತ್ಯುಂಜಯ ಶಾಬಾದಿ, ವೀರಯ್ಯಸ್ವಾಮಿ, ಪಾಠಶಾಲೆ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts