More

    ಬಾಲಿವುಡ್​ನಲ್ಲೂ ‘ಕಬ್ಜ’ ಹವಾ; ಬುಲೆಟ್​ ಸವಾರಿ ಮಾಡಿದ ಉಪೇಂದ್ರ

    ಮುಂಬೈ: ಆರ್​. ಚಂದ್ರು ನಿರ್ಮಾಣದ, ನಿರ್ದೇಶನದ ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಗುರುವಾರ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಂದಿದೆ. ಮುಂಬೈನಲ್ಲಿ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬಹಳ ಗ್ರ್ಯಾಂಡ್ ಆಗಿ ನಡೆದಿದೆ.

    ಇದನ್ನೂ ಓದಿ: 10 ವರ್ಷಗಳ ಹಿಂದಿನ ಶೀರ್ಷಿಕೆ, ಈಗ ಚಿತ್ರವಾಗುತ್ತಿದೆ …

    ಬಾಲಿವುಡ್​ನಲ್ಲೂ 'ಕಬ್ಜ' ಹವಾ; ಬುಲೆಟ್​ ಸವಾರಿ ಮಾಡಿದ ಉಪೇಂದ್ರಹಿಂದಿ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಮತ್ತು ವಿತರಕ ಆನಂದ್​ ಪಂಡಿತ್​, ‘ಕಬ್ಜ’ ಚಿತ್ರದ ಹಿಂದಿ ಭಾಷೆಯ ವಿತರಣೆಯ ಹಕ್ಕುಗಳನ್ನು ಪಡೆದಿದ್ದಾರೆ. ಈ ಸಂಬಂಧ ಪ್ರೀ-ರಿಲೀಸ್​ ಈವೆಂಟ್ ಆಯೋಜಿಸಿದ್ದರು ಆನಂದ್ ಪಂಡಿತ್.‌ ಮೊದಲಿಗೆ ಬುಲೆಟ್ ಮೂಲಕ ಸುಮಾರು 60 ಬೈಕ್​ಗಳಲ್ಲಿ ಎರಡೂ ವರೆ ಕಿ.ಮೀ Rally ಮಾಡಲಾಯಿತು. ಉಪೇಂದ್ರ, ಆನಂದ್ ಪಂಡಿತ್ ಬುಲೆಟ್ ಏರಿ ಸವಾರಿ ಮಾಡಿದರು. ಇನ್ನು, ಸುದೀಪ್, ಶ್ರೇಯಾ ಶರಣ್ ಸಹ ಅವರಿಗೆ ಸಾಥ್​ ಕೊಟ್ಟರು.

    ನಂತರ ಮಾತನಾಡಿದ ಉಪೇಂದ್ರ, ಮುಂಬೈನಲ್ಲಿ ಚಿತ್ರದ ಪ್ರಚಾರ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವುದರ ಜತೆಗೆ, ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ ಎಂದರು. ಚಿತ್ರವನ್ನು ನೋಡಿ ಹರಸಿ, ಹಾರೈಸಿ ಎಂದರು.

    ಸುದೀಪ್​ಗೆ ಮುಂಬೈ ಹೊಸದಲ್ಲ. ಈಗಾಗಲೇ ಅಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು, ತಮ್ಮ ಹೃದಯದಲ್ಲಿ ಮುಂಬೈ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರು. ‘ಜನ ನಮ್ಮ ಚಿತ್ರದ ಟ್ರೇಲರ್​ಗೆ ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ. ಈ ಪ್ರೀತಿ ಚಿತ್ರ ಬಿಡುಗಡೆಯಾದ ಮೇಲೂ ಮುಂದುವರೆಯಲಿ’ ಎಂದು ಹೇಳಿದರು.

    ಇದನ್ನೂ ಓದಿ: ಅರೆಭಾಷೆಯಲ್ಲಿ ತಯಾರಾಯ್ತು ‘ಮೂಗಜ್ಜನ ಕೋಳಿ’ ಎಂಬ ಮಕ್ಕಳ ಚಿತ್ರ …

    ‘ಕಬ್ಜ’ ಚಿತ್ರವು ಮಾರ್ಚ್ ೧೭ ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts