More

  ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!

  ಚೆನ್ನೈ: ಸೈಬರ್ ಖದೀಮರ ಮೋಸದ ಜಾಲಕ್ಕೆ ನಟಿ ನಗ್ಮಾ ಸಿಕ್ಕಿ ಬಿದ್ದು, ಭಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ.  ಬ್ಯಾಂಕ್ ಹೆಸರಿನಲ್ಲಿ ನಗ್ಮಾಗೆ ಕರೆ ಮಾಡಿದ್ದ ವಂಚಕರು, ಕ್ಷಣಾರ್ಧದಲ್ಲೇ ಅವರ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾರೆ. ಈ ಕುರಿತಾಗಿ ನಟಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಭಾರತದ ಮೊದಲ ತೃತೀಯ ಲಿಂಗಿ ದಂಪತಿಯ ಮಗುವಿಗೆ ನಾಮಕರಣ!

  ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಫೆಬ್ರವರಿ 28 ರಂದು ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ಬಂದಿದೆ. ನಂತರ ಖದೀಮರು ಫೋನ್​​ ಕಾಲ್​​ ಮಾಡಿ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ. ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ.

  ಇದನ್ನೂ ಓದಿ:  ಒಂದು ತಿಂಗಳ ಕಾಲ ಕೀಟ ತಿಂದು, ತನ್ನ ಮೂತ್ರವನ್ನೇ ಕುಡಿದು ಬದುಕುಳಿದ!

  “ವಂಚಕ ನನ್ನ ಫೋನ್‌ನ ರಿಮೋಟ್‌ ಆಕ್ಸೆಸ್‌ ಕೂಡ ಆತ ತೆಗೆದುಕೊಂಡಿದ್ದ. ಲಿಂಕ್‌ನಲ್ಲಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿದ ನಂತರ ಫಲಾನುಭವಿ ಖಾತೆಯನ್ನು ರಚಿಸಿದ್ದನು. ಆ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗೆ ನನ್ನ ಖಾತಿಯಿಂದ ರೂ 1 ಲಕ್ಷವನ್ನು ವರ್ಗಾವಣೆ ಮಾಡಿದ್ದ. ನಾನು ಇದಕ್ಕಾಗಿ ಸಾಕಷ್ಟು ಒಟಿಪಿ ಕೂಡ ಸ್ವೀಕರಿಸಿದ್ದೇನೆ. ಆತ ಕನಿಷ್ಠ 20 ಪ್ರಯತ್ನಗಳನ್ನು ಮಾಡಿದ್ದಾನೆ ಎಂದು ತೋರಿಸಿದೆ. ಅದೃಷ್ಟವಶಾತ್, ನಾನು ದೊಡ್ಡ ಮೊತ್ತವನ್ನು ಕಳೆದುಕೊಳ್ಳಲಿಲ್ಲ,” ಎಂದು ಅವರು ಹೇಳಿದ್ದಾರೆ.

  ಈ ಮೋಸದ ಜಾಲ ಕುರಿತಾಗಿ ಸೈಬರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬಿಸಿ ತನಿಖೆ ಆರಂಭಿಸಿದ್ದಾರೆ.

  VIDEO | ಊರಿಗೆಲ್ಲಾ ಊಟ ಹಾಕಿ ಶ್ವಾನಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿದ ಕುಟುಂಬ

  See also  ಉಡುಪಿ ವಕೀಲನಿಗೆ ಜೀವಾವಧಿ ಶಿಕ್ಷೆ: ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ಸಿಕ್ತು ನ್ಯಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts