More

    ಅರೆಭಾಷೆಯಲ್ಲಿ ತಯಾರಾಯ್ತು ‘ಮೂಗಜ್ಜನ ಕೋಳಿ’ ಎಂಬ ಮಕ್ಕಳ ಚಿತ್ರ …

    ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗೌಡ ಜನಾಂಗದ ಮಾತೃಭಾಷೆಯಾಗಿರುವ ಅರೆಭಾಷೆಯಲ್ಲಿ ಇದುವರೆಗೂ ಯಾವೊಂದು ಚಿತ್ರ ಸಹ ನಿರ್ಮಾಣವಾಗಿರಲಿಲ್ಲ. ಈಗ ಈ ಭಾಷೆಯಲ್ಲಿ ‘ಮೂಗಜ್ಜನ ಕೋಳಿ’ ಎಂಬ ಚಿತ್ರ ಸದ್ದಿಲ್ಲದೆ ನಿರ್ಮಾಣವಾಗಿದೆ.

    ಇದನ್ನೂ ಓದಿ: ಯುವತಿಯ ಅಪಹರಣದ ಸುತ್ತ … ‘ಹೈಡ್ ಅಂಡ್ ಸೀಕ್’ ಫಸ್ಟ್ ಲುಕ್ ಬಿಡುಗಡೆ

    ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ ‘ಜೀಟಿಗೆ’ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಳ್ಯದ ಗೌಡ ಸಮುದಾಯದವರು ಮಾತಾನಾಡುವ ಅರೆಭಾಷೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಹಂಬಲ ನಿರ್ದೇಶಕರಿಗಿತ್ತಂತೆ.

    ಈ ಕುರಿತು ಮಾತನಾಡುವ ಅವರು, ‘ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಪ್ರಥಮ ಚಿತ್ರ. ಕೆ.ಸುರೇಶ್ ಈ ಚಿತ್ರದ ನಿರ್ಮಾಪಕರು. ಬಯಲುಸೀಮೆಯಲ್ಲಿ ಬೆಳೆದ ಹುಡುಗಿಯೊಬ್ಬಳು ಸುಳ್ಯಕ್ಕೆ ಬರುತ್ತಾಳೆ. ಅಲ್ಲಿನ ಸುಂದರ ಪರಿಸರ ಕಂಡು ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಮಾತುಬಾರದ ಮೂಗಜ್ಜ, ಕೋಳಿ ಸಾಕಿಕೊಂಡು ಇರುತ್ತಾನೆ. ಈ ಹುಡುಗಿ ಹಾಗೂ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧಗಳ ಕಥೆಯೇ ‘ಮೂಗಜ್ಜನ ಕೋಳಿ” ಎಂದು ಕಥೆಯ ಬಗ್ಗೆ ಹೇಳುತ್ತಾರೆ ಸಂತೋಷ್​ ಮಾಡ.

    ಮೂಗಜ್ಜನ ಪಾತ್ರದಲ್ಲಿ ನವೀನ್ ಕೆ ಪಡೀಲ್ ಹಾಗೂ ಕನಸು ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಕುಮಾರಿ‌ ಸಾನಿಧ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಇದನ್ನೂ ಓದಿ: ‘ನಮ್ ನಾಣಿ ಮದ್ವೆ ಪ್ರಸಂಗ’ ಹೇಳೋಕೆ ಹೊರಟಿದ್ದಾರೆ ಹೇಮಂತ್ ಹೆಗ್ಡೆ!

    ‘ಮೂಕಜ್ಜನ ಕೋಳಿ’ ಚಿತ್ರಕ್ಕೆ ಸುರೇಶ್ ಅರಸ್ ಸಂಕಲನ, ವಿಷ್ಣುಪ್ರಸಾದ್ ಛಾಯಾಗ್ರಹಣ, ಅರುಣ್ ಗೋಪನ್ ಹಾಡು ಸಂಯೋಜನೆ ಹಾಗೂ ದೀಪಾಂಕುರನ್ ಅವರ ಹಿನ್ನೆಲೆ ಸಂಗೀತವಿದೆ.

    ‘ಬಿಂಗೋ’ ಚಿತ್ರಕ್ಕೆ ರಾಗಿಣಿ ಎಂಟ್ರಿ … ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts