More

    ಗೂಗಲ್​ ಪೇನಲ್ಲಿ 2 ರೂ. ಪಾವತಿಸಿ 45 ಸಾವಿರ ಕಳ್ಕೊಂಡ ಉದ್ಯೋಗಿ! ಸೈಬರ್ ಕಳ್ಳರ ಹೊಸ ಟೆಕ್ನಿಕ್​ ಕಂಡು ಪೊಲೀಸರೇ ಶಾಕ್​​

    ಅಲುವಾ: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

    ಫೋನ್ ಕರೆ ಮಾಡಿ ಒಟಿಪಿ ಹೇಳುವಂತೆ ಒತ್ತಾಯಿಸುವುದು, ಆನ್ಲೈನ್ ವಂಚನೆ, ಫೇಸ್​ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು, ಬ್ಯಾಂಕ್​ನಿಂದ ಕರೆ ಮಾಡಿದ್ದೇವೆ ಎಂದು ಹೇಳಿ ಎಟಿಎಮ್​​ ಪಾಸ್​ವರ್ಡ್​ ಕೇಳುವುದು. ಖಾಸಗಿ ಮಾಹಿತಿಗಳನ್ನು ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಆನ್ಲೈಲ್ ಖದೀಮರು ಹೊಸದೊಂದು ವಂಚನೆಗೆ ಇಳಿದಿದ್ದಾರೆ. ಕೊರಿಯರ್​ ಟ್ರ್ಯಾಕಿಂಗ್​ ಸರ್ವೀಸ್​ ಅಂತಾ ಹೇಳಿ ಅಕೌಂಟ್​ ಹಣ ಹಾಕಿಸಿಕೊಂಡು ಬ್ಯಾಂಕ್​ ಖಾತೆಗೆ ಖನ್ನ ಹಾಕುತ್ತಿದ್ದಾರೆ ಸೈಬರ್ ಕಳ್ಳರು.

    ಹೌದು, ಸೈಬರ್​ ಖದೀಮರು ಕೊರಿಯರ್​ ಹೆಸರಿನಲ್ಲಿ ಮೆಡಿಕಲ್​ ಸಂಸ್ಥೆಗೆ ನಕಲಿ ಮೆಸೇಜ್​ ಕಳುಹಿಸಿ, ಸಂಸ್ಥೆಯ ಉದ್ಯೋಗಿ ಖಾತೆಯಿಂದ 45 ಸಾವಿರ ರೂಪಾಯಿ ಹಣ ಎಗರಿಸಿರುವ ಘಟನೆ ಕೇರಳದ ಅಲುವಾದಲ್ಲಿ ನಡೆದಿದೆ. ಕಿಝಾಕ್ಕೆ ಕಡುಂಗಲ್ಲೂರು ಮೂಲದ ಅಮಲ್​ ಎಸ್​ ಕುಮಾರ್​ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸಂತ್ರಸ್ತ ಅಮಲ್​, ಅಲುವಾದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ಇರುವ ರತ್ನಂ ಮತ್ತು ಕಂಪನಿಯ ಉದ್ಯೋಗಿ. ಸೋಮವಾರ 6287655632 ನಂಬರ್​ನಿಂದ ಅಮಲ್​ ಫೋನ್​ಗೆ ಕರೆಬಂದಿದೆ. ನಿಮಗೊಂದು ಕೊರಿಯರ್​ ಬಂದಿದೆ ಎಂದು ಹೇಳಿದ್ದಾರೆ. ಸ್ಥಳದ ನಿಖರವಾದ ಮಾಹಿತಿಗಾಗಿ ಅರ್ಜಿ ಭರ್ತಿ ಮಾಡಿ ವಾಟ್ಸ್​ಆ್ಯಪ್​ನಲ್ಲಿ ಮೂಲಕ ಕಳುಹಿಸುವಂತೆ ಹೇಳಿದ್ದಾರೆ. ಕೊರಿಯರ್​ ಮೂಲಕವೇ ಅನೇಕ ಮೆಡಿಸಿನ್​ ಸ್ವೀಕರಿಸಿದ್ದರಿಂದ ಅಮಲ್​ಗೆ ಯಾವುದೇ ಅನುಮಾನ ಬರಲಿಲ್ಲ.

    ಫಾಸ್ಟರ್​ ಕೊರಿಯರ್​ ಹೆಸರಿನಲ್ಲಿ ಫೋನ್​ ಮಾಡಿದ್ದರು. ಅಲ್ಲದೆ, ವಿಳಾಸ ಮತ್ತು ಮೊಬೈಲ್​ ನಂಬರ್​ ಸಹ ನಮೂದಿಸಿದ್ದರು. ಕೊರಿಯರ್​ ಟ್ರ್ಯಾಕಿಂಗ್ ಸರ್ವೀಸ್​ ಎಂದು ಹೇಳಿ 2 ರೂಪಾಯಿ ಗೂಗಲ್​ ಪೇ ಮಾಡುವಂತೆ ಹೇಳಿದ್ದರು. ಯಾವಾಗ ಅಮಲ್​ ಹಣ ಪಾವತಿಸಿದನೋ ಆ ದಿನ ಸಂಜೆಯೇ ಆತನ ಅಲುವಾ ಶಾಖೆಯ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆಯಿಂದ 45 ಸಾವಿರ ರೂಪಾಯಿ ಹಣ ಕಡಿತಗೊಂಡಿದೆ​.

    ಮೋಸ ಹೋಗಿರುವುದು ಗೊತ್ತಾಗುತ್ತದಂತೆ ಅಮಲ್​, ಅಲುವಾದಲ್ಲಿರುವ ಸೈಬರ್​ ಕೇಂದ್ರ ಮತ್ತು ಸರ್ಕಲ್​ ಇನ್ಸ್​ಪೆಕ್ಟರ್​ಗೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ಒಮಿಕ್ರಾನ್ ಬಿಎಫ್-7 ಅಪಾಯಕಾರಿ ತಳಿ, ಮಾರ್ಗಸೂಚಿ ಅಗತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ

    ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts