ಬೆಳಗಾವಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಕರೊನಾದ ಹೊಸ ತಳಿ ಒಮಿಕ್ರಾನ್ ಬಿಎಫ್-7 ಅಪಾಯಕಾರಿ ಸೋಂಕು ಆಗಿದ್ದು, ಮುಂದಿನ ದಿನಗಳಲ್ಲಿ ಹೊಸ ವರ್ಷಾಚರಣೆ ಸೇರಿದಂತೆ ಹಲವಾರು ಹಬ್ಬಗಳು ಬರುವುದರಿಂದ ಕೆಲವು ಮಾರ್ಗಸೂಚಿಗಳನ್ನು ತರುವುದು ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಹಾಗೂ ಮತ್ತಿತರ ದೇಶಗಳಲ್ಲಿ ಕರೊನಾ ಹೊಸ ತಳಿಯಾದ ಒಮಿಕ್ರಾನ್ ಬಿಎಫ್-7 ಎಂಬ ಸೋಂಕು ಹರಡುತ್ತಿದ್ದು ರಾಜ್ಯದಲ್ಲಿಯೂ ಅದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ 3 ಗಂಟೆಗೆ ಸರ್ವ ಪಕ್ಷಗಳ ಸಭೆ ಮಾಡಿ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
ಸಿಎಂ ಬೊಮ್ಮಾಯಿ ಹೇಳಿದ್ದೇನು?
ವೇಗವಾಗಿ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ, ಆರೋಗ್ಯ ಸಚಿವರ ನೇತೃತ್ವದಲ್ಲಿ ತಜ್ಞರ ಜತೆ ಸಲಹಾ ಸಮಿತಿ ಸಭೆ ನಡೆಸಿ, ಸೋಂಕು ಹರಡದಂತೆ ತಡೆಯಲು ಕ್ರಮವಹಿಸಲಾಗುವುದು. ಸರ್ವಾಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ತಪ್ಪದೇ ತಜ್ಞರ ಸಲಹೆ ಪಾಲಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಯುವಕ ಅರೆಸ್ಟ್!
ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗ್ತಿದ್ದ ಖದೀಮನಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು!