More

    ಮನುಷ್ಯ ಇದನ್ನೆಲ್ಲ ತಿಂದರೆ ಭೂಮಿಗೇ ಆಪತ್ತು!; ಸಮೀಕ್ಷೆಯಿಂದ ಆತಂಕಕಾರಿ ಮಾಹಿತಿ ಹೊರಬಿತ್ತು..

    ನವದೆಹಲಿ: ಈ ಭೂಮಿ ಮೇಲಿನ ನಮ್ಮ ಅಸ್ತಿತ್ವ ನಾವು ತಿನ್ನುವ ಆಹಾರದ ಮೇಲೆ ಅವಲಂಬಿಸಿದೆ ಎನ್ನುವುದು ಎಷ್ಟು ನಿಜವೋ, ನಾವಿರುವ ಈ ಭೂಮಿಯ ಅಳಿವು-ಉಳಿವಿಗೂ ನಮ್ಮ ಆಹಾರ ಕಾರಣವಾಗುತ್ತದೆ ಎಂಬುದು ಕೂಡ ಅಷ್ಟೇ ನಿಜ. ಅದನ್ನು ತಿಳಿಸುವಂಥ ಸಮೀಕ್ಷೆಯೊಂದು ಹೊರಬಿದ್ದಿದ್ದು, ಮನುಷ್ಯ ಇನ್ನು ಯೋಚನೆ ಮಾಡಿ ತಿನ್ನುವಂತಾಗಿದೆ.

    ಹೌದು.. ಈ ಭೂಮಿಯ ಅಸ್ತಿತ್ವಕ್ಕೆ ಧಕ್ಕೆ ಬರಬಾರದು ಎಂದರೆ ಮನುಷ್ಯ ತನ್ನ ಆಹಾರದ ಆಯ್ಕೆಯಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ಭೂಗ್ರಹಕ್ಕೆ ತೊಂದರೆ ಉಂಟಾಗಬಾರದು ಎಂದರೆ ಕೆಲವೊಂದು ಆಹಾರಗಳನ್ನು ತಿನ್ನದಿರುವುದೇ ಒಳಿತು ಎಂಬುದನ್ನು ಸಮೀಕ್ಷೆಯೊಂದು ಹೊರಹಾಕಿದೆ. ಇಂಥದ್ದೊಂದು ಸಮೀಕ್ಷೆಯ ವರದಿ ‘ಕರೆಂಟ್ ನ್ಯೂಟ್ರಿಷನ್​ ರಿಪೋರ್ಟ್ಸ್’ ಎಂಬ ಜರ್ನಲ್​ನಲ್ಲಿ ಪ್ರಕಟಗೊಂಡಿದೆ.

    ಇದನ್ನೂ ಓದಿ: ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

    ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ನಲ್ಲಿ ಪರಿಸರದ ಮೇಲೆ ಆಹಾರದ ಪರಿಣಾಮಗಳ ಕುರಿತ 20 ಅಧ್ಯಯನಗಳನ್ನ ಪರಿಶೀಲಿಸಿರುವ ಯುನಿವರ್ಸಿಟಿ ಆಫ್​ ಸೌತ್ ಆಸ್ಟ್ರೇಲಿಯಾ ಡಯೆಟಿಷಿಯನ್ ಸಾರಾ ಫೋರ್ಬ್ಸ್​ ಆಹಾರದ ಆಯ್ಕೆಯಲ್ಲಿ ಜಾಗರೂಕರಾಗಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.

    ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ನ ಮನೆಗಳಲ್ಲಿ ಡಯೆಟಿಷನ್​ಗಳ ಸಲಹೆಗೂ ಮೀರಿ ಜಂಕ್​ ಫುಡ್​ಗಳನ್ನು ಸೇವಿಸಲಾಗುತ್ತಿದ್ದು, ಆ ಮೂಲಕ ಆಹಾರ ಸಂಬಂಧಿ ಗ್ರೀನ್​ಹೌಸ್ ಗ್ಯಾಸ್​ ಬಿಡುಗಡೆಗೆ ಕಾರಣವಾಗುತ್ತಿರುವ ಜತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರಲೂ ಮೂಲವಾಗುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ನಂಜನಗೂಡು ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್; ಪ್ರೆಯಸಿಗಾಗಿ ಜಗಳ ಮಾಡಿಕೊಂಡವ ಜೈಲಲ್ಲಿ ಸಾವು

    2020ರಲ್ಲಿ ಬಿಡುಗಡೆ ಆಗಿರುವ ವರದಿಯೊಂದರ ಪ್ರಕಾರ ಆಸ್ಟ್ರೇಲಿಯಾ ಒಂದರಲ್ಲೇ 510 ಮೆಟ್ರಿಕ್​ ಟನ್ ಕಾರ್ಬನ್​ ಡಯಾಕ್ಸೈಡ್ ಬಿಡುಗಡೆ ಆಗಿದ್ದು, ಅದರಲ್ಲಿ ಆಹಾರ ಸಂಬಂಧಿತವಾಗಿ ಬಿಡುಗಡೆಯಾದ ಕಾರ್ಬನ್ ಡಯಾಕ್ಸೈಡ್ ಪ್ರಮಾಣವೇ ಶೇ. 14.2 ಇತ್ತು. ಅಂದರೆ ಅಲ್ಲಿನ ಒಬ್ಬ ಪ್ರಜೆ ಸರಾಸರಿಯಾಗಿ ದಿನಕ್ಕೆ ಆಹಾರ ಸಂಬಂಧಿತವಾಗಿ 19.7 ಕೆ.ಜಿ. ಕಾರ್ಬನ್ ಡಯಾಕ್ಸೈಡ್ ಹೊರಹಾಕುತ್ತಾನೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಸಿಹಿತಿಂಡಿ, ಕೇಕ್​, ಕರಿದ ತಿಂಡಿ ಹಾಗೂ ಸಂಸ್ಕರಿತ ಆಹಾರಗಳ ಸೇವನೆಯಿಂದ ಹೀಗೆ ಕಾರ್ಬನ್​ ಡಯಾಕ್ಸೈಡ್ ಹೊರಸೂಸುವಿಕೆ ಹೆಚ್ಚಾಗುತ್ತಿದೆ. ಇದು ಪರಿಸರಕ್ಕೆ ಮಾರಕವಾಗುವ ಜತೆಗೆ ಭೂಮಿಯ ಅಸ್ತಿತ್ವಕ್ಕೂ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts