More

    ಆರ್​​ಡಿಪಿಆರ್ ನಲ್ಲಿ ಸಮಾಲೋಚಕರಾಗಲು ಅರ್ಜಿ ಸಲ್ಲಿಸಿ

    ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೆಂದ್ರ ಕಚೇರಿ ಮತ್ತು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಇದನ್ನೂ ಓದಿ  : ಜೆಇಇ, ನೀಟ್ ಪರೀಕ್ಷೆ ರದ್ದುಪಡಿಸಲು ದೆಹಲಿ ಡಿಸಿಎಂ ಸಿಸೋಡಿಯಾ ಮನವಿ

    ದಾಖಲಾತಿ ತಜ್ಞರು, ಹಿರಿಯ ಭೂ ವಿಜ್ಞಾನಿ, ಸಮಾಲೋಚಕರು, ಹಿರಿಯ ಸಮಾಲೋಚಕರು, ಕಿರಿಯ ಸಮಾಲೋಚಕರು, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು, ಸಪೋರ್ಟ್ ಇಂಜಿನಿಯರ್, ಡೇಟಾ ಎಂಟ್ರಿ ಆಪರೇಟರ್, ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಜಿಲ್ಲಾ ಎಂಐಎಸ್ ಸಮಾಲೋಚಕರು ಹುದ್ದೆಗಳು ಹಾಗು ಜಿಲ್ಲಾ ಪಂಚಾಯಿತಿ ಕಚೇರಿ- ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿ ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು, ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು, ಘನ ಮತ್ತು ದ್ರವ್ಯತ್ಯಾಜ್ಯ ನಿರ್ವಹಣೆ ಸಮಾಲೋಚಕರು, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕ (ಎಂಐಎಸ್/ ಎಂ ಇ) ಹುದ್ದೆಗಳಿವೆ.

    ಇದನ್ನೂ ಓದಿ :ಪ್ರೀತಿಸಿದವ ಬಾಳು ನೀಡುವ ಬದಲು ಸಾವಿನ ಮನೆಗೆ ದೂಡಿದ್ದೇಕೆ?

    ಆಯಾ ಹುದ್ದೆಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ಹಾಗೂ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು.
    ಆಗಸ್ಟ್ 31ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://rdpr.karnataka.gov.in ಸಂಪರ್ಕಿಸಬಹುದು.

    “ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts