More

    ಜೆಇಇ, ನೀಟ್ ಪರೀಕ್ಷೆ ರದ್ದುಪಡಿಸಲು ದೆಹಲಿ ಡಿಸಿಎಂ ಸಿಸೋಡಿಯಾ ಮನವಿ

    ನವದೆಹಲಿ: ಕೋವಿಡ್ -19 ಹಿನ್ನೆಲೆಯಲ್ಲಿ ಜೆಇಇ ಮತ್ತು ನೀಟ್ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
    ಈ ವರ್ಷ ಪರ್ಯಾಯ ಪ್ರವೇಶ ವಿಧಾನವನ್ನು ಬಳಸಬೇಕು ಮತ್ತು ಪರೀಕ್ಷೆಗಳನ್ನು ನಡೆಸಬಾರದು ಎಂದೂ ಅವರು ತಿಳಿಸಿದ್ದಾರೆ.
    ಜೆಇಇ (ಮುಖ್ಯ) ಮತ್ತು ನೀಟ್-ಯುಜಿ ಪರೀಕ್ಷೆಗಳನ್ನು ಸೆಪ್ಟೆಂಬರ್‌ನಲ್ಲಿ ನಿಗದಿಯಂತೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಪ್ರೀತಿಸಿದವ ಬಾಳು ನೀಡುವ ಬದಲು ಸಾವಿನ ಮನೆಗೆ ದೂಡಿದ್ದೇಕೆ?

    “ಜೆಇಇ ಮತ್ತು ನೀಟ್ ಹೆಸರಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಎರಡೂ ಪರೀಕ್ಷೆಗಳನ್ನು ತಕ್ಷಣವೇ ರದ್ದುಗೊಳಿಸಿ ಪರ್ಯಾಯ ಪ್ರವೇಶ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕೆಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
    “ಪರೀಕ್ಷೆಯು ಮಾತ್ರ ಪ್ರವೇಶಕ್ಕೆ ಒಂದು ಮಾರ್ಗವಾಗಿದೆ ಎಂದು ಯೋಚಿಸುವುದು ಪ್ರಾಯೋಗಿಕವಲ್ಲದ ಮತ್ತು ಸಂಪ್ರದಾಯವಾದಿ ಚಿಂತನೆಯಾಗಿದೆ. ಇತರ ದೇಶಗಳು ಪ್ರವೇಶಕ್ಕೆ ಬೇರೆ ಬೇರೆ ವಿಧಾನಗಳನ್ನು ಹೊಂದಿರುವಾಗ ಪರೀಕ್ಷೆಗಳನ್ನು ಹೊರತುಪಡಿಸಿ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಭಾರತದಲ್ಲಿ ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
    ಕೋವಿಡ್ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಯನ್ನು ಮತ್ತಷ್ಟು ಮುಂದೂಡಬೇಕೆಂದು ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸುತ್ತಿದ್ದಾರೆ.

    ಇದನ್ನೂ ಓದಿ :  “ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ

    ಸೆಪ್ಟೆಂಬರ್​​​ನಲ್ಲಿ ನಡೆಯಲಿರುವ ಜೆಇಇ (ಮುಖ್ಯ) (ಏಪ್ರಿಲ್ 2020) ನೀಟ್-ಯುಪಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಜೆಇಇ (ಮುಖ್ಯ) ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯಲಿದ್ದು, ಜೆಇಇ (ಅಡ್ವಾನ್ಸ್ಡ್) ಸೆಪ್ಟೆಂಬರ್ 27 ರಂದು ಹಾಗೂ ನೀಟ್ ಸೆಪ್ಟೆಂಬರ್ 13 ರಂದು ನಡೆಯಲಿದೆ.

    ಹೊಸ ಕಾರು ತಂದು ಅದರಲ್ಲೇ ವೈದ್ಯೆಯನ್ನು ಕೊಲೆ ಗೈದ ಆರೋಪಿ ವೈದ್ಯನಿಗೀಗ ಪಾಪಪ್ರಜ್ಞೆಯಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts