More

    ಮ್ಯುಚೂವಲ್​ ಫಂಡ್​ ಉದ್ಯಮ ಪ್ರವೇಶಿಸಲು ಸಜ್ಜಾಗಿದೆ ಜಿಯೋ

    ಮುಂಬೈ: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮತ್ತು ಬ್ಲ್ಯಾಕ್‌ರಾಕ್ ನಡುವಿನ ಜಂಟಿ ಉದ್ಯಮವು ಮ್ಯೂಚುಯಲ್ ಫಂಡ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಮಾರುಕಟ್ಟೆ ನಿಯಂತ್ರಕವಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ಅರ್ಜಿಯನ್ನು ಪರಿಗಣಿಸುತ್ತಿದೆ.

    ಅಕ್ಟೋಬರ್ 19 ರಂದು ಜಿಯೋ ತನ್ನ ಅರ್ಜಿಯನ್ನು ಸಲ್ಲಿಸಿದೆ.

    ಭಾರತದ ಉನ್ನತ ಉದ್ಯಮಿ ಮುಖೇಶ್ ಅಂಬಾನಿ ಅವರು ಹೊಸದಾಗಿ ಆರಂಭಿಸಿರುವ ಹಣಕಾಸು ಸೇವೆಗಳ ವಿಭಾಗವಾದ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಜತೆ ಬ್ಲ್ಯಾಕ್‌ರಾಕ್ ಸಂಸ್ಥೆಯು ಜಂಟಿ ಉದ್ಯಮವನ್ನು ರೂಪಿಸಲು ಒಪ್ಪಂದ ಮಾಡಿಕೊಂಡಿದೆ.

    ಜಿಯೋ ಬ್ಲ್ಯಾಕ್​ರಾಕ್​ ಭಾರತದಲ್ಲಿನ ಲಕ್ಷಾಂತರ ಹೂಡಿಕೆದಾರರಿಗೆ ಕೈಗೆಟುಕುವ, ನವೀನ ಹೂಡಿಕೆ ಪರಿಹಾರಗಳನ್ನು ನೀಡಲು ಜಿಯೋ ಫೈನಾನ್ಶಿಯಲ್ ಸೇವೆಗಳ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬ್ಲ್ಯಾಕ್​ರಾಕ್​ನ ಹೂಡಿಕೆ ಪರಿಣತಿಯೊಂದಿಗೆ ಸಂಯೋಜಿಸುತ್ತದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಭಾರತದಲ್ಲಿ ಮ್ಯೂಚುವಲ್​ ಫಂಡ್​ ಉದ್ಯಮವು 50 ಲಕ್ಷ ಕೋಟಿ ರೂಪಾಯಿ ತಲುಪುವ ಸಾಧ್ಯತೆ ಇದ್ದು, ಈ ಉದ್ಯಮದಲ್ಲಿ ಮೊದಲ ಬಾರಿಗೆ ಡಿಜಿಟಲ್ ವಿಧಾನವನ್ನು ಜಿಯೋ ಬಳಸಿಕೊಳ್ಳಬಹುದಾಗಿದೆ.

    ಡಿಎಸ್​ಪಿ ಜತೆ ತನ್ನ ಜಂಟಿ ಉದ್ಯಮದಿಂದ ಹಿಂತೆಗೆದ ಅಂದಾಜು ಐದು ವರ್ಷಗಳ ನಂತರ ಬ್ಲ್ಯಾಕ್​ರಾಕ್​ ಸಂಸ್ಥೆಯು ಜಿಯೋ ಜತೆ ಸಹಭಾಗಿತ್ವದ ಮೂಲಕ ಭಾರತದ ಆಸ್ತಿ ನಿರ್ವಹಣಾ ವಲಯಕ್ಕೆ ಮರು-ಪ್ರವೇಶಿಸಲು ಸಿದ್ಧವಾಗಿದೆ,

    ಮಾರುಕಟ್ಟೆ ನಿಯಂತ್ರ ಸೆಬಿಯಿಂದ ಅಂತಿಮ ಅನುಮೋದನೆ ಮಾತ್ರ ಬಾಕಿ ಇದ್ದು, ಬೃಹತ್​ ಮ್ಯೂಚುವಲ್​ ಫಂಡ್​ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಜಿಯೋ ಫೈನಾನ್ಶಿಯಲ್ ಮತ್ತು ಬ್ಲ್ಯಾಕ್‌ರಾಕ್ ಸಜ್ಜಾಗಿವೆ.

    2022 ರ ಹೊತ್ತಿಗೆ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳ ಪ್ರಕಾರ ಬ್ಲ್ಯಾಕ್‌ರಾಕ್ ಸಂಸ್ಥೆಯ ಒಟ್ಟು ಆಸ್ತಿ 8.2 ಲಕ್ಷ ಕೋಟಿ ಡಾಲರ್​ ಆಗಿದೆ.

    ಕಡಲ್ಗಳ್ಳರು ಅಪಹರಿಸಿದ ಹಡಗಿನಿಂದ 15 ಭಾರತೀಯರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

    ಪುಣೆ ಬಿಜೆಪಿ ಶಾಸಕನಿಂದ ಕಾನ್‌ಸ್ಟೆಬಲ್‌ಗೆ ಕಪಾಳ ಮೋಕ್ಷ ವಿಡಿಯೋ ವೈರಲ್​

    ಜಗತ್ತಿನಲ್ಲೇ ಭಾರತದ ಆರ್ಥಿಕತೆ ಭರ್ಜರಿ ಬೆಳವಣಿಗೆ: ಜಿಡಿಪಿ ದರ ಶೇಕಡಾ 7.3 ಎಂದು ಅಂದಾಜಿಸಿದೆ ಎನ್​ಎಸ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts