More

    23 ಜೀಪು, 6 ಇನ್ನೋವಾ ಖರೀದಿಸಿ 2 ತಿಂಗಳಾದರೂ ಬಳಸಲು ಕೊಟ್ಟಿಲ್ಲ!

    ಬೆಂಗಳೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳಿಗೆ ವಿತರಿಸಲು ಹೊಸದಾಗಿ 23 ಜೀಪು ಹಾಗೂ 6 ಇನ್ನೋವಾ ವಾಹನಗಳನ್ನು ಸಾರಿಗೆ ಇಲಾಖೆ ಖರೀದಿಸಿದೆ. ಆದರೆ, 2 ತಿಂಗಳಾದರೂ ಕೂಡ ಕಚೇರಿಗಳಿಗೆ ವಿತರಿಸಿಲ್ಲ ಎಂದು ಆರ್‌ಟಿಒಗಳು ಆರೋಪಿಸಿದ್ದಾರೆ. 19 ವಾಹನ ಈಗಾಗಲೇ ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತದೆ.

    ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪವಿರುವ ಶೋ ರೂಂನಿಂದ ವಾಹನಗಳನ್ನು ಖರೀದಿಸಲಾಗಿದೆ. ಮೊದಲಿಗೆ ಆರ್‌ಟಿಒ ಕಚೇರಿಗಳಿಗೆ ಹಂಚಿಕೆ ಮಾಡಲು ಬರೀ ಜೀಪುಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, ನಂತರ ಮೊದಲು ತೀರ್ಮಾನಿಸಿದ್ದಂತಹ ಜೀಪುಗಳ ಖರೀದಿ ಸಂಖ್ಯೆಯನ್ನು ಇಳಿಸಿ, ಹೊಸದಾಗಿ ಇನ್ನೋವಾ ವಾಹನಗಳನ್ನು ಖರೀದಿಸಲು ನಿರ್ಧರಿಸಲಾಯಿತು ಎಂದು ಆರ್‌ಟಿಒ ಅಧಿಕಾರಿಗಳು ಹೇಳುತ್ತಾರೆ. ಇದನ್ನೂ ಓದಿ: ಪೇಟಿಎಂ​ ಬ್ಯಾನ್​ ಮಾಡಿದ ಗೂಗಲ್ ಪ್ಲೇಸ್ಟೋರ್​- ಕಾರಣ ಏನು ಗೊತ್ತಾ?

    ಆರ್‌ಟಿಒ ಅಧಿಕಾರಿಗಳು ಹೇಳುವ ಪ್ರಕಾರ ಈವರೆಗೆ ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿ, ಬಾಗೇಪಲ್ಲಿ ಚೆಕ್‌ಪೋಸ್ಟ್ ಮತ್ತು ಅತ್ತಿಬೆಲೆ ಚೆಕ್‌ಪೋಸ್ಟ್‌ಗಳಿಗೆ ಮಾತ್ರ 3 ವಾಹನಗಳನ್ನು ವಿತರಿಸಲಾಗಿದೆ. ಉಳಿದ ವಾಹನಗಳನ್ನು ಯಾವ ಕಚೇರಿಗೂ ಹಂಚಿಕೆ ಮಾಡಿಲ್ಲ. ವಾಹನ ಬೇಕೆಂದು ಸಾರಿಗೆ ಇಲಾಖೆ ಪ್ರಧಾನ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ, ಬೇಡಿಕೆ ಈಡೇರಿಸುವ ಕಚೇರಿಗಳಿಗೆ ಮಾತ್ರ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

    ಆದರೆ, 6 ಇನ್ನೋವಾ ವಾಹನಗಳನ್ನು ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. 19 ಜೀಪುಗಳನ್ನು ಆರ್‌ಟಿಒ ಕಚೇರಿಗಳಿಗೆ ವಿತರಣೆ ಮಾಡಲಾಗಿದ್ದು, ಉಳಿದ ವಾಹನಗಳ ಹಂಚಿಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಲ್ಲದೇ ಬೆಂಗಳೂರು ವ್ಯಾಪ್ತಿಯ ಆರ್‌ಟಿಒ ಕಚೇರಿಯೊಂದಕ್ಕೆ ಹೊಸ ವಾಹನ ಕೊಡುವುದಾಗಿ ಹೇಳಿ ಹಳೇ ವಾಹನವನ್ನು ವಿತರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

    ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

    ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts