More

    ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

    ಪುತ್ತೂರು: ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗೆ ತೊಡಕಾಗಿದ್ದು, ಬಹುತೇಕ ಸಿಬ್ಬಂದಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಸಿಬ್ಬಂದಿ ಕೊರತೆ ಮಧ್ಯೆಯೂ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಗೆ 2019-20ನೇ ಸಾಲಿನಲ್ಲಿ 47,94,00,000 ರೂ. ರಾಜಸ್ವ ವಸೂಲಿಯ ಗುರಿ ನೀಡಲಾಗಿದ್ದು, 39,63,67,940 ರೂ. ಸಂಗ್ರಹವಾಗಿದೆ. ಸರ್ಕಾರ ನಿಗದಿಪಡಿಸಿದ ಗುರಿಗಿಂತ 8,30,32,060ರೂ. ಕಡಿಮೆ ಸಂಗ್ರಹವಾಗಿದೆ.

    ಇಲ್ಲಿನ ಕಚೇರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ 1, ಹಿರಿಯ ಮೋಟಾರು ನಿರೀಕ್ಷಕ 2, ಅಧೀಕ್ಷಕರು 2, ಮೋಟಾರು ವಾಹನ ನಿರೀಕ್ಷಕರು 3, ಪ್ರಥಮ ದರ್ಜೆ ಸಹಾಯಕರು 7, ದ್ವಿತೀಯ ದರ್ಜೆ ಸಹಾಯಕರು 4, ಬೆರಳಚ್ಚುಗಾರರು 1, ಚಾಲಕ 2, ಹಾಗೂ 3 ಡಿ ಗ್ರೂಪ್ ಸೇರಿದಂತೆ ಒಟ್ಟು 25 ಹುದ್ದೆಗಳ ಮಂಜೂರುಗೊಂಡಿದೆ. ಈ ಪೈಕಿ ಸಾರಿಗೆ ಅಧಿಕಾರಿ ಹುದ್ದೆ ಭರ್ತಿಯಾಗಿದೆ.

    1 ಹಿರಿಯ ಮೋಟಾರು ವಾಹನ ನಿರೀಕ್ಷಕ, 1 ಅಧೀಕ್ಷಕ, 1 ಮೋಟಾರು ನಿರೀಕ್ಷಕ, 3 ಪ್ರಥಮ ದರ್ಜೆ ಸಹಾಯಕ, 2 ದ್ವಿತೀಯ ದರ್ಜೆ ಸಹಾಯಕ 1 ಬೆರಳಚ್ಚುಗಾರ, 2 ಚಾಲಕ ಹಾಗೂ 3 ಡಿ ಗ್ರೂಪ್ ನೌಕರ ಹುದ್ದೆಗಳು ಸೇರಿ ಒಟ್ಟು 14 ಹುದ್ದೆಗಳು ಖಾಲಿಯಾಗಿದೆ. ಜತೆಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರು ಇತರ ಕಚೇರಿಗೆ ನಿಯೋಜನೆಗೊಂಡಿದ್ದಾರೆ

    ಹೊರೆಯೂ ಹೆಚ್ಚಳ: ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಗೆ ರಾಜಸ್ವ ಸಂಗ್ರಹಣೆಯ ಗುರಿ ಹೆಚ್ಚಾಗಿದ್ದು, ಸಿಬ್ಬಂದಿ ಕೊರತೆಯಿಂದ ಹೊರೆಯೂ ಹೆಚ್ಚಳಗೊಂಡಿದೆ. 2019-20ನೇ ಸಾಲಿನಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ಸೇರಿದಂತೆ ಒಟ್ಟು 11,265 ಹೊಸ ವಾಹನಗಳ ನೋಂದಣಿಯಾಗಿದೆ. ಮುಂದಿನ ದಿನಗಳಲ್ಲಿ 12 ಸಾವಿರ ಹೊಸ ವಾಹನಗಳ ನೋಂದಣಿ ಗುರಿಯೂ ಇದೆ.

    ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೆಚ್ಚುವರಿ ಜವಾಬ್ದಾರಿಯೊಂದಿಗೆ ಪುತ್ತೂರು ಆರ್‌ಟಿಒ ಸಿಬ್ಬಂದಿಗೆ ಕರ್ತವ್ಯದ ಜವಾಬ್ದಾರಿ ನೀಡಲಾಗಿದೆ. 25 ಹುದ್ದೆಗಳು ಮಂಜೂರುಗೊಂಡಿದ್ದರೂ ಪ್ರಮುಖ 14 ಹುದ್ದೆಗಳು ಖಾಲಿಯಾಗಿವೆ.ಸರ್ಕಾರ ಖಾಲಿ ಹುದ್ದೆ ಭರ್ತಿಗೊಳಿಸಲು ಕ್ರಮ ಕೈಗೊಳ್ಳಬಹುದು.

    – ಆನಂದ ಗೌಡ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts