More

    ಪೇಟಿಎಂ​ ಬ್ಯಾನ್​ ಮಾಡಿದ ಗೂಗಲ್ ಪ್ಲೇಸ್ಟೋರ್​- ಕಾರಣ ಏನು ಗೊತ್ತಾ?

    ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪೇಮೆಂಟ್ ಆ್ಯಪ್ ಪೇಟಿಎಂ ಗೂಗಲ್ ಪ್ಲೇ ಸ್ಟೋರ್​ನಿಂದ ದಿಢೀರ್​ ಕಾಣೆಯಾಗಿದೆ.

    ಒನ್​97 ಕಮ್ಯುನಿಕೇಷನ್​ ಲಿಮಿಟೆಡ್​ ಇದರ ಮಾಲೀಕತ್ವ ಹೊಂದಿದ್ದು, ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್, ಮತ್ತು ಇತರ ಆ್ಯಪ್ ಗಳು ಪ್ಲೇಸ್ಟೋರ್​ನಲ್ಲಿ ಪೇಟಿಎಂ ಲಭ್ಯ ಇವೆ. ಆದರೆ ಗೂಗಲ್​ ಪ್ಲೇಸ್ಟೋರ್​ನಲ್ಲಿ ಏಕೆ ಹೀಗಾಗಿದೆ ಎಂಬ ಮಾಹಿತಿ ಇಲ್ಲ.

    ಈ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್​, ಪೇಟಿಎಂ ಆ್ಯಪ್ ಮೂಲಕ ಜೂಜಿಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ಅದರ ಮೇಲೆ ನಿಷೇಧ ಹೇರಲಾಗಿದೆ. ಜೂಜು ಕಟ್ಟುವ ಯಾವುದೇ ಆ್ಯಪ್ ಅಥವಾ ಗೇಮ್​ಗಳನ್ನು ಪ್ಲೇಸ್ಟೋರ್‌ನಲ್ಲಿ ನಾವು ಇರಿಸಿಕೊಳ್ಳುವುದಿಲ್ಲ ಎಂದಿದೆ.

    ಇದನ್ನೂ ಓದಿ: ವಿರೋಧದ ನಡುವೆ ಮಂಡನೆಯಾಯ್ತು ಕೃಷಿ ಮಸೂದೆ: ಗಾಳಿಸುದ್ದಿಗಳಿಗೆ ಕಿವಿಕೊಡಬೇಡಿ ಎಂದ ಪ್ರಧಾನಿ

    ಈ ಬಗ್ಗೆ ಪೇಟಿಎಂ ಆ್ಯಪ್ ಡೆವಲಪರ್‌ಗಳಿಗೆ ಕೂಡ ತಿಳಿಸಲಾಗಿದೆ. ನಮ್ಮ ಷರತ್ತು ಮತ್ತು ನಿಯಮಗಳ ಪ್ರಕಾರ, ಬಳಕೆದಾರರಿಗೆ ಅನುಕೂಲಕರ ಮತ್ತು ಸುರಕ್ಷಿತ ಎನ್ನುವ ಅಪ್ಲಿಕೇಶನ್‌ಗಳನ್ನು ಮಾತ್ರ ನಾವು ಪುರಸ್ಕರಿಸುತ್ತೇವೆ, ಅದರ ಹೊರತು ಕ್ಯಾಸಿನೋ, ಬೆಟ್ಟಿಂಗ್, ಜೂಜು ಮತ್ತು ರಮ್ಮಿ, ಬಾಜಿ ಕಟ್ಟುವ ಸ್ಪರ್ಧೆ ಆಯೋಜಿಸುವ ಅಪ್ಲಿಕೇಶನ್‌ಗಳಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜಾಗವಿಲ್ಲ ಎಂದು ಗೂಗಲ್​ ಹೇಳಿದೆ.

    ಈ ಕುರಿತು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿರುವ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಾಲಿಕವಾಗಿ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್​ಡೆಟ್​ಗಳೂ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ. ಭಯ ಬೇಡ ಎಂದಿದೆ.

    ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ

    ಅತ್ಯಾಚಾರ ಮಾಡಿದರೆ ‘ಅದಕ್ಕೇ’ ಬೀಳತ್ತೆ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

    ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts