More

    ಆತ್ಮಜ್ಞಾನದ ಕೊರತೆಯಿಂದ ಸಂಸ್ಕಾರ ಕಣ್ಮರೆ

    ಕಂಪ್ಲಿ: ಆತ್ಮಜ್ಞಾನದ ಕೊರತೆ ಅನೇಕ ಸಾಮಾಜಿಕ ಅಸಮಾನತೆಗಳಿಗೆೆ ಕಾರಣವಾಗಿದೆ ಎಂದು ಗುಂಡ್ಲುಪೇಟೆಯ ಜೆ.ಎಸ್.ಎಸ್.ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎನ್.ಎಂ.ಗಿರಿಜಾಪತಿ ಹೇಳಿದರು.

    ಇಲ್ಲಿನ ಗಂಗಾ ಸಂಕೀರ್ಣದಲ್ಲಿ ಬುಧವಾರ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮದಡಿ ಅಲ್ಲಮನ ಯೋಗ ಕಥನ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಆಸೆ, ಆಮಿಷಗಳಿಗೆ ಬೆನ್ನು ಹತ್ತಿದ್ದರಿಂದ ಪ್ರಜ್ಞಾವಂತ ಗುರುಸ್ಥಾನ ಶೂನ್ಯವಾಗಿದೆ.

    ಇದನ್ನು ಓದಿ: ಜೀವಾತ್ಮ-ಪರಮಾತ್ಮ ಭಾವದ ಮಿಲನವೇ ಯೋಗ : ತ್ಯಾಗೀಶ್ವರಾನಂದಜೀ ಮಹರಾಜ್

    ಯೋಗ ಆತ್ಮಜ್ಞಾನದ ತಳಹದಿ ಮೇಲೆ ರೂಪಿತಗೊಂಡ ತಾತ್ವಿಕ ಪ್ರಮೇಯವಾಗಿದ್ದು, ಜೀವಾತ್ಮ ಪರಮಾತ್ಮ ಕೂಡುವುದೇ ಯೋಗವಾಗಿದೆ. ಯೋಗ ಜ್ಞಾನ ಗಳಿಸುವಲ್ಲಿ ಸಮಾನ ಅವಕಾಶವಿದ್ದು ಯಾವುದೇ ತಾರತಮ್ಯವಿಲ್ಲ.

    ಮಗುತನವನ್ನು ಪ್ರಾಪ್ತಿಮಾಡಿಕೊಳ್ಳುವುದೇ ಅಲ್ಲಮನ ಯೋಗ ದರ್ಶನವಾಗಿದೆ. ಆತ್ಮಜ್ಞಾನದ ಕೊರತೆಯಿಂದ ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಕಣ್ಮರೆಯಾಗುತ್ತಿವೆ. ಭಕ್ತಿಯೋಗ ಪೂಜಿ (ಶೂನ್ಯ)ವಾಗಬೇಕೆ ಹೊರತು ಆಡಂಬರದ ಪೂಜೆ ಮಾಡುವುದಲ್ಲ. ಭಾರತೀಯರ ಯೋಗಶಾಸ್ತ್ರವು ಜಗತ್ತಿಗೆ ನೀಡಿದ ಅತಿದೊಡ್ಡ ಶ್ರೇಷ್ಠ ಕೊಡುಗೆಯಾಗಿದೆ ಎಂದರು.


    ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎ.ಸಿ.ದಾನಪ್ಪ ಮಾತನಾಡಿ, ನಿತ್ಯ ಜೀವನದಲ್ಲಿ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.


    ಪ್ರಮುಖರಾದ ಎಸ್.ಶಾಮಸುಂದರರಾವ್, ಚಂದ್ರಯ್ಯ ಸೊಪ್ಪಿಮಠ, ಬಂಗಿ ದೊಡ್ಡ ಮಂಜುನಾಥ, ಕವಿತಾಳ ಬಸವರಾಜ, ಅಶೋಕ ಕುಕನೂರ, ಟಿ.ನಿರಂಜನ ಸ್ವಾಮಿ, ಬಡಿಗೇರ ಜಿಲಾನ್ ಸಾಬ್, ಕಾಳಿಂಗವರ್ಧನ ಹಾದಿಮನಿ, ಸಜ್ಜೇದ ವೀರಭದ್ರಪ್ಪ, ಎಚ್.ನಾಗರಾಜ, ವೀರಮ್ಮ ನಾಗರಾಜ, ಬಂಗಿ ಸರೋಜಾ ಹೆಗಡೆ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts