More

    ಸಾಕುನಾಯಿಯಿಂದಲೇ ಮಾಲೀಕನ ಜೀಪ್ ಅಪಘಾತ; ಆರ್ಟ್ ಗ್ಯಾಲರಿಗೆ ಜೀಪ್ ಡಿಕ್ಕಿ ಹೊಡೆಸಿದ ನಾಯಿ!

    ನವದೆಹಲಿ: ಚಲಿಸುತ್ತಿರುವ ವಾಹನಕ್ಕೆ ನಾಯಿ ಅಥವಾ ಇನ್ಯಾವುದೋ ಪ್ರಾಣಿ ಅಡ್ಡಬಂದು ಡಿಕ್ಕಿ ಹೊಡೆಯುವುದು ಅಪರೂಪವೇನಲ್ಲ. ಆದರೆ ಇಲ್ಲೊಂದು ವಿಚಿತ್ರ ಅಪಘಾತ ಸಂಭವಿಸಿದೆ. ನಾಯಿಯೇ ವಾಹನವನ್ನು ಮುಂದಕ್ಕೆ ಚಲಾಯಿಸಿ ಆರ್ಟ್ ಗ್ಯಾಲರಿಯೊಂದಕ್ಕೆ ಡಿಕ್ಕಿ ಹೊಡೆಸಿದೆ.

    ಜೀಪ್ ಮಾಲೀಕ ಅದರೊಳಗೆ ಇಲ್ಲದ ಸಂದರ್ಭದಲ್ಲಿ ಆತನ ಸಾಕುನಾಯಿ ಇಂಥದ್ದೊಂದು ಕಿತಾಪತಿ ನಡೆಸಿದೆ. ಅಮೆರಿಕದ ವಿಸ್ಕಾನ್ಸಿನ್​ನ ಸ್ಟರ್ಜನ್ ಬೇ ಎಂಬಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಜೀಪ್​ ಅಲ್ಲೇ ಎದುರಿಗಿದ್ದ ಆರ್ಟ್​ ಲೈಬ್ರರಿಗೆ ಹೋಗಿ ಡಿಕ್ಕಿ ಹೊಡೆದಿದೆ. ಆದರೆ ತಕ್ಷಣ ಕಾರಿನ ಬಳಿ ಬಂದು ಒಳನೋಡಿದವರಿಗೆ ಕಾಣಿಸಿದ್ದು ನಾಯಿ ಮಾತ್ರ.

    ಸಾಕುನಾಯಿಯಿಂದಲೇ ಮಾಲೀಕನ ಜೀಪ್ ಅಪಘಾತ; ಆರ್ಟ್ ಗ್ಯಾಲರಿಗೆ ಜೀಪ್ ಡಿಕ್ಕಿ ಹೊಡೆಸಿದ ನಾಯಿ!

    ಹೌದು.. ಐದು ವರ್ಷದ ಆಸ್ಟ್ರೇಲಿಯನ್ ಶೆಫರ್ಡ್​ ತಳಿಯ ನಾಯಿ ಕ್ಯಾಲಿ ಇಂಥದ್ದೊಂದು ಅವಾಂತರಕ್ಕೆ ಕಾರಣವಾಗಿದೆ. ಕಾರೊಳಗಿದ್ದ ಈ ನಾಯಿ ಡ್ರೈವರ್​ ಸೀಟ್ ಪಕ್ಕ ಇರುವ ಶಿಫ್ಟರ್​ನನ್ನು ಡ್ರೈವ್ ಮೋಡ್​ಗೆ ಹಾಕಿದ್ದೇ ಇಷ್ಟಕ್ಕೆಲ್ಲ ಕಾರಣ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಡ್ರೈವರ್​ನನ್ನು ಕರೆಸಿ ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಏನೂ ಆಗಿಲ್ಲ. (ಏಜೆನ್ಸೀಸ್)

    ಇನ್ನು 15 ದಿನಗಳೊಳಗೆ ಬಗರ್ ಹುಕುಂ ಸಮಿತಿ ರಚನೆ; ಕಂದಾಯ ಸಚಿವ ಆರ್. ಅಶೋಕ್​ ಭರವಸೆ

    ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts