More

    ಟರ್ಕಿ ನಂತರ ಜಪಾನ್​ ಹಾಗೂ ಅಫ್ಘಾನಿಸ್ತಾನದಲ್ಲೂ ಭೂಕಂಪ!

    ನವದೆಹಲಿ: ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೀಕರ ಭೂಕಂಪದಿಂದಾಗಿ 50 ಸಾವಿರಕ್ಕೂ ಹೆಚ್ಚಿನ ಪ್ರಾಣ ಹಾನಿ ಉಂಟಾಗಿದೆ. ಈ ಆಘಾತದಿಂದ ಜಗತ್ತು ಇನ್ನೂ ಆಚೆಗೆ ಬಂದಿಲ್ಲ. ಈ ನಡುವೆ ಜಪಾನ್​ ಹಾಗೂ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದೆ.

    ಜಪಾನ್:
    ರಿಕ್ಟರ್ ಸ್ಕೇಲ್‌ನಲ್ಲಿ 6.1 ರ ತೀವ್ರತೆಯ ಭೂಕಂಪವು ಜಪಾನ್‌ನ ಉತ್ತರದ ಮುಖ್ಯ ದ್ವೀಪವಾದ ಹೊಕ್ಕೈಡೊವನ್ನು ಶನಿವಾರ ಅಪ್ಪಳಿಸಿದೆ ಎಂದು ಜಪಾನ್‌ನ ಸುದ್ದಿ ಸಂಸ್ಥೆ ಕ್ಯೋಡೋ ನ್ಯೂಸ್ ವರದಿ ಮಾಡಿದೆ ಹೊಕ್ಕೈಡೋದ ಪೂರ್ವ ಭಾಗದಲ್ಲಿ ರಾತ್ರಿ 10:27 ಕ್ಕೆ ಸಂಭವಿಸಿದ ಭೂಕಂಪದ ನಂತರ ಯಾವುದೇ ಸುನಾಮಿ ಸಂಭವಿಸಿಲ್ಲ ಎಂದು ಜಪಾನ್‌ನ ಹವಾಮಾನ ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪ! ದೇವರ ಆಟ ಬಲ್ಲವರು ಯಾರು?

    ಈ ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಆಸ್ತಿ ಹಾನಿಯಾದ ತಕ್ಷಣದ ವರದಿಗಳಿಲ್ಲ. ಕುಶಿರೋದಿಂದ ಪೆಸಿಫಿಕ್ ಮಹಾಸಾಗರದಲ್ಲಿ 60 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಭೂಕಂಪ ಈಶಾನ್ಯ ಜಪಾನ್ ಮತ್ತು ಪೂರ್ವ ಜಪಾನ್ ಸೇರಿದಂತೆ ವಿಶಾಲ ಪ್ರದೇಶವನ್ನು ನಡುಗಿಸಿದೆ ಎಂದು ಕ್ರೋಡೋ ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ

    ಅಫ್ಘಾನಿಸ್ತಾನ:
    ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 273 ಕಿಮೀ ದೂರದಲ್ಲಿ 4.3 ತೀವ್ರತೆಯ ಭೂಕಂಪ ಭಾನುವಾರ ಮಧ್ಯರಾತ್ರಿ 02:14:52 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (NCS) ಟ್ವೀಟ್​ ಮಾಡಿ ತಿಳಿಸಿದೆ. “ಭೂಕಂಪದ ತೀವ್ರತೆ 4.3 ಆಗಿದ್ದು, ಇಂದು ಬೆಳಗ್ಗೆ ಫೈಜಾಬಾದ್​ನ ಈಶಾನ್ಯ ದಿಕ್ಕಿನ 273 ಕಿಮೀ ದೂರದಲ್ಲಿ 180 ಕಿಮೀ ಆಳದಲ್ಲಿ , ನಡೆದಿದೆ. ಈ ಬಗ್ಗೆ ವಿವರವಾಗಿ NCS ಟ್ವಿಟ್ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts