More

    ಹತ್ತು ನಿಮಿಷ ತಡವಾಗಿ ಬಂದಿದ್ದಕ್ಕೆ 335 ಪ್ರಯಾಣಿಕರಿದ್ದ ವಿಮಾನವನ್ನೇ ವಾಪಸ್​ ಕಳಿಸಿದರು!

    ಜಪಾನ್​: ಜಪಾನಿನ ಸ್ಥಳೀಯ ವರದಿಗಳ ಪ್ರಕಾರ, 335 ಪ್ರಯಾಣಿಕರನ್ನು ಹೊತ್ತ ಜಪಾನ್ ಏರ್‌ಲೈನ್ಸ್ ವಿಮಾನವು 10 ನಿಮಿಷ ತಡವಾಗಿ ಬಂದ ಕಾರಣ ತನ್ನ ಗಮ್ಯಸ್ಥಾನದಿಂದ ಹಿಂತಿರುಗಿಸಲಾಗಿದೆ.

    ವಿಮಾನ, ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಿಂದ ಫುಕುವೊಕಾ ಪ್ರಾಂತ್ಯದ ಹಕಾಟಾ-ಕುದಲ್ಲಿರುವ ಫುಕುವೊಕಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಇದು ಫೆಬ್ರವರಿ 19ರಂದು ಸಂಜೆ 6.30 ಕ್ಕೆ ಟೇಕ್ ಆಫ್ ಆಗಬೇಕಿತ್ತು. ಆದರೆ ಇನ್ನೂ ತನಿಖೆಯ ಕಾರಣಕ್ಕಾಗಿ ರಾತ್ರಿ 8ರವರೆಗೆ ವಿಳಂಬವಾಯಿತು.

    ಇದನ್ನೂ ಓದಿ: ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಟೋಕಿಯೋ ಮತ್ತು ಫುಕುವೋಕಾ 1,000 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿವೆ. ರಾತ್ರಿ 10 ಗಂಟೆಗೆ ಅಂತಿಮ ಲ್ಯಾಂಡಿಂಗ್ ಕಟ್ಆಫ್ ನಂತರ 10 ನಿಮಿಷಗಳ ನಂತರ ವಿಮಾನವು ಫುಕುವೊಕಾವನ್ನು ತಲುಪಿತು ಎಂದು ದಿ ಅಸಾಹಿ ಶಿಂಬುನ್ ಪತ್ರಿಕೆ ವರದಿ ಮಾಡಿದೆ. ಅಲ್ಲಿ ಲ್ಯಾಂಡಿಂಗ್​ ಮಾಡಲು ಅನುಮತಿ ನೀಡದ ಕಾರಣ ವಾಪಸ್​ ಟೋಕಿಯೋಗೆ ತೆರಳಬೇಕಾಯಿತು.

    ಹಿಂತಿರುಗುವಾಗ, ವಿಮಾನವು ನಿರ್ವಹಣೆ ಮತ್ತು ಇಂಧನ ತುಂಬಲು ಕನ್ಸಾಯ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಬೇಕಾಯಿತು. ಕೊನೆಗೆ ಬೆಳಗಿನ ಜಾವ 2.50ಕ್ಕೆ ಟೋಕಿಯೊ ತಲುಪಿತು

    ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರನ್ನು ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದು ಫೆಬ್ರವರಿ 20 ರ ಬೆಳಿಗ್ಗೆ ಅವರನ್ನು ಫುಕುವೋಕಾಗೆ ಕಳಿಸಲು ವ್ಯವಸ್ಥೆ ಮಾಡಿದೆ.

    ಫುಕುವೋಕಾ ಸಮೀಪದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಾತ್ರಿ 10 ಗಂಟೆಯ ನಂತರ ವಿಮಾನಗಳನ್ನು ಇಳಿಸಲು ಅನುಮತಿಸಲಾಗುವುದಿಲ್ಲ. ಆದರೆ ಕೆಟ್ಟ ಹವಾಮಾನ ಮತ್ತು ಇತರ ಅನಿವಾರ್ಯ ವಿಳಂಬಗಳನ್ನು ಪರಿಗಣಿಸಿ ಈ ಗಡುವನ್ನು ವಿಸ್ತರಿಸುವ ಅವಕಾಶ ಇದೆ. (ಏಜೆನ್ಸೀಸ್​)

    ಇದನ್ನೂ ಓದಿ: ಏರ್ ಇಂಡಿಯಾದಿಂದ 840 ವಿಮಾನ ಖರೀದಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts