More

    ಏರ್ ಇಂಡಿಯಾದಿಂದ 840 ವಿಮಾನ ಖರೀದಿ?

    ನವದೆಹಲಿ: ಫ್ರಾನ್ಸ್​ನ ಏರ್​ಬಸ್​ನಿಂದ 250 ಮತ್ತು ಅಮೆರಿಕದ ಬೋಯಿಂಗ್ ಸಂಸ್ಥೆಯಿಂದ 220 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ ಟಾಟಾ ಒಡೆತನದ ಏರ್ ಇಂಡಿಯಾ, ಹೆಚ್ಚುವರಿಯಾಗಿ 370 ಹೊಸ ವಿಮಾನ ಖರೀದಿಸಲು ಬೇಡಿಕೆ (ಆರ್ಡರ್) ಮಂಡಿಸಿದೆ. ಇದರಿಂದ ಒಟ್ಟು ಖರೀದಿ 840ಕ್ಕೆ ಏರಲಿದೆ. ಇಷ್ಟು ಬೃಹತ್ ಸಂಖ್ಯೆಯಲ್ಲಿ ವಿಮಾನ ಖರೀದಿ ನಡೆದರೆ ವೈಮಾನಿಕ ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ನಿರ್ಮಾಣ ಆಗಲಿದೆ.

    ಆದರೆ ಹೆಚ್ಚುವರಿ 370 ವಿಮಾನ ಖರೀದಿಯು ಇನ್ನೂ ಆಯ್ಕೆ ಹಂತದಲ್ಲಿದೆ ಎಂದು ಏರ್​ಇಂಡಿಯಾದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ದಶಕದಲ್ಲಿ ಇನ್ನಷ್ಟು ಹೊಸ ವಿಮಾನಗಳು ಅಗತ್ಯ ಬೀಳುವ ಕಾರಣ ಹೆಚ್ಚುವರಿ ಖರೀದಿಯ ಆಯ್ಕೆಯನ್ನು ಹೊಂದಲಾಗಿದೆ ಎಂದು ಏರ್ ಇಂಡಿಯಾದ ವಾಣಿಜ್ಯ ಮತ್ತು ಪರಿವರ್ತನಾ ವಿಭಾಗದ ಮುಖ್ಯಾಧಿಕಾರಿ ನಿಪುಣ್ ಅಗರ್​ವಾಲ್ ಹೇಳಿದ್ದಾರೆ. ಇದಲ್ಲದೆ ವಿಮಾನಗಳ ಇಂಜಿನ್ ನಿರ್ವಹಣೆಗಾಗಿ ಇಂಟರ್​ನ್ಯಾಷನಲ್ ಸಿಎಫ್​ಎಂ, ರೋಲ್ಸ್- ರಾಯ್್ಸ ಜಿಇ ಏರೋಸ್ಪೇಸ್​ಗಳ ಜತೆ ದೀರ್ಘ ಕಾಲದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಹೆಚ್ಚುವರಿಯಾಗಿ 370 ವಿಮಾನಗಳ ಖರೀದಿಯು ದೂರದೃಷ್ಟಿಯ ಯೋಜನೆ. ಇದು ಆಯ್ಕೆಯ ಹೊರತು, ಖರೀದಿ ಮಾಡಲೇಬೇಕೆಂಬ ಬಾಧ್ಯತೆಯಲ್ಲ ಎಂದು ಏರ್​ಇಂಡಿಯಾ ಸಿಇಒ ಕ್ಯಾಂಪ್​ಬೆಲ್ ವಿಲ್ಸನ್ ಸಿಬ್ಬಂದಿ ವರ್ಗಕ್ಕೆ ಬರೆದಿರುವ ಆಂತರಿಕ ಪತ್ರದಲ್ಲಿ ಹೇಳಿದ್ದಾರೆಂದು ಮೂಲಗಳು ಹೇಳಿವೆ. ಪ್ರಸ್ತುತ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್​ಗಳು ಸುಮಾರು 140 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಬಹುತೇಕ ವಿಮಾನಗಳು ಚಿಕ್ಕವು. ಈಗ ಹಿರಿದಾದ ವಿಮಾನಗಳನ್ನು ಹೊಂದಬೇಕೆಂದು ಏರ್​ಬಸ್ ಮತ್ತು ಬೋಯಿಂಗ್ ಜತೆ ಒಪ್ಪಂದ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts