More

    ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷಕ್ಕಾಗಿ 30 ವರ್ಷ ದುಡಿದಿದ್ದಾರೆ; ಅವರಿಗೆ ಟಿಕೆಟ್ ಇಲ್ಲ ಎನ್ನುವುದು ಸರಿಯಲ್ಲ!

    ಕೊಪ್ಪಳ: ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷಕ್ಕಾಗಿ 30 ವರ್ಷ ದುಡಿದಿದ್ದಾರೆ. ಅವರಿಗೆ ಟಿಕೆಟ್ ಇಲ್ಲ ಎನ್ನುವುದು ಸರಿಯಲ್ಲ. ಪ್ರಸ್ತುತ ರಾಜ್ಯ ಬಿಜೆಪಿಯ ಈ ಬೆಳವಣಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದೆ ಯಾವ ಗುಂಪು ನನ್ನನ್ನ ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳಬಾರದು ಎಂದು ತಡೆದಿತ್ತೋ, ಅದೇ ಗುಂಪು ಬಿಎಸ್​ವೈ ಅವರಿಗೆ ಫುಲ್ ಸ್ಟಾಪ್ ಇಟ್ಟಿತು. ಅವರನ್ನು ವಿಧಾನಸೌಧದಲ್ಲಿ ಕಣ್ಣೀರು ಹಾಕುವಂತೆ ಮಾಡಿತು ಎಂದು ಗಂಗಾವತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಮೂಗಿಗೆ ಮೊಳೆ ಹೊಡೆದುಕೊಂಡ, ಕುತ್ತಿಗೆಗೆ ಹಾಕಿದ್ದ ಉರುಲು ತಪ್ಪಿಸಿಕೊಂಡ! ವಿನೂತನ ಪ್ರಚಾರಕ್ಕಿಳಿದ ಸ್ವಯಂ ಘೋಷಿತ ಪಕ್ಷದ ಅಭ್ಯರ್ಥಿ

    75ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಇತಿಹಾಸ ಸೃಷ್ಟಿಯಾಗುವಂತೆ ಕೆಲಸ ಮಾಡಿದ್ದರು. ಜಗದೀಶ್ ಶೆಟ್ಟರ್ ಅವರಿಗೆ ರಾಜಕೀಯ ಮಾಡದೇ ಇರುವಂತಹ ಪರಸ್ಥಿತಿ ಇಲ್ಲ. ಜನಾರ್ದನ ರೆಡ್ಡಿಯನ್ನು ಕಡೆಗಣೆಸಿದ್ದು ಅದು ಬೇರೆ. ಆದರೆ ಬಿಎಸ್​ವೈ, ಶೆಟ್ಟರ್, ಈಶ್ವರಪ್ಪ ಅಂತವರನ್ನು ಕಡೆಗಣಿಸಿದ್ದು ಸರಿ ಅಲ್ಲ. ಇವರೆಲ್ಲರೂ ಪಕ್ಷಕ್ಕಾಗಿ ದುಡಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಬಹಳ ವಿಸ್ತೃತವಾಗಿ ಮಾತನಾಡುತ್ತೇನೆ ಎಂದು ಜನಾರ್ಧನ ರೆಡ್ಡಿ ಹೇಳಿದರು. ‌

    ಗೂಳಿಹಟ್ಟಿ ಶೇಖರ್ ನನ್ನೊಂದಿಗೆ ಚರ್ಚೆ ಮಾಡಿದ್ದಾರೆ!

    ಹೊಸದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್​ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಆಪ್ತರು ಹಾಗೂ ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಅವರು ತೀರ್ಮಾನವನ್ನು ಪ್ರಕಟಿಸಿದ್ದು ಬಂಡಾಯ ಅಥವಾ ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್​ ಪತನ; ಪಕ್ಷ ತೊರೆದ ಗೂಳಿಹಟ್ಟಿ ಶೇಖರ್​

    ಗೂಳಿಹಟ್ಟಿ ಶೇಖರ್ ಪಕ್ಷ ಸೇರ್ಪಡೆ ಬಗ್ಗೆ ಮಾತನಾಡುತ್ತಾ, ಈಗಾಗಲೇ ನನ್ನ ಜೊತೆ ಶೇಖರ್ ಮಾತನಾಡಿದ್ದಾರೆ. ಇವತ್ತು ನಾಳೆಯೊಳಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts