More

    ಈ ಬಾರಿಯೂ ಸ್ಪರ್ಧಿಸಬೇಕೆಂಬುದು ನನ್ನ ಆಶಯ… ನಡ್ಡಾ ಅವರಲ್ಲಿ ಭಾವನೆ ಹಂಚಿಕೊಂಡಿದ್ದೇನೆ; ಜಗದೀಶ್ ಶೆಟ್ಟರ್

    ನವದೆಹಲಿ: ಟಿಕೆಟ್ ಕೈತಪ್ಪುವ ಭೀತಿಯಲ್ಲಿ ದೆಹಲಿಗೆ ಬಂದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಾತುಕಥೆಯ ನಂತರ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ನಾನು ನನ್ನ ಮನಸ್ಸಿನಲ್ಲಿದ್ದ ಎಲ್ಲ ಅಭಿಪ್ರಾಯವನ್ನು ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಈ ಬಾರಿಯೂ ಚುನಾವಣೆಗೆ ನಿಲ್ಲಬೇಕು ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬಿಜೆಪಿಯಲ್ಲಿ ಇರುವವರು ಕಾಳಸಂತೆಕೋರರು, ಬೆಟ್ಟಿಂಗ್​ ದಂಧೆಕೋರರು: ಎಚ್​.ಡಿ.ಕುಮಾರಸ್ವಾಮಿ ಆರೋಪ

    ನನ್ನ ಭಾವನೆ ಹಂಚಿಕೊಂಡಿದ್ದೇನೆ…

    ಜೆ.ಪಿ. ನಡ್ಡಾ ಅವರೊಂದಿಗೆ ನನ್ನ ಭಾವನೆ ಹಂಚಿಕೊಂಡಿದ್ದು, ಅವರು ಎಲ್ಲವನ್ನೂ ಆಲಿಸಿದ್ದಾರೆ. ಹಿರಿಯ ನಾಯಕರೊಂದಿಗೆ ಪ್ರತಿಕ್ರಿಯಿಸಿ ತಿಳಿಸುವುದಾಗಿ ನಡ್ಡಾ ಹೇಳಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಜೆಪಿ ನಡ್ಡಾ ಅವರನ್ನು ಭೇಟಿಯಾಗುವು ಮುನ್ನ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಟಿಕೆಟ್ ನೀಡದಿರುವದು ಬಗ್ಗೆ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿ: 5 ಕ್ಷೇತ್ರಗಳ ಟಿಕೆಟ್ ಘೋಷಿಸಿ ಉಳಿದೆರಡರ ಕುತೂಹಲ ಕಾಯ್ದಿರಿಸಿದ ಬಿಜೆಪಿ!

    ಸ್ಪರ್ಧೆ ಖಚಿತ!

    ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ವರಿಷ್ಠರು ನೀಡಿದ ಸಂದೇಶವನ್ನು ಖಡಾಖಂಡಿತವಾಗಿ ತಿರಸ್ಕರಿಸಿ​, ಮತ್ತೊಮ್ಮೆ ಅವಕಾಶ ನೀಡಲೇಬೇಕು ಎಂದು ಜಗದೀಶ್​ ಶೆಟ್ಟರ್ ಹೇಳಿದ್ದರು. ಅಲ್ಲದೇ ಟಿಕೆಟ್​ ಸಿಗಲಿ ಅಥವಾ ಸಿಗದೇ ಇರಲಿ ಹುಬ್ಬಳ್ಳಿ&ಧಾರವಾಡ ಸೆಂಟ್ರಲ್​ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ನಿನ್ನೆ ಹೇಳಿಕೆ ನೀಡಿದ್ದರು.

     ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ…

    ಜಗದೀಶ ಶೆಟ್ಟರ್​ ಅವರಿಗೆ ಮಂಗಳವಾರ ಬೆಳಗ್ಗೆ ಫೋನ್​ ಕರೆ ಮಾಡಿದ್ದ ಬಿಜೆಪಿ ವರಿಷ್ಠರು, ಬೇರೆಯವರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶೆಟ್ಟರ್​, ನಾನು 30 ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಟಿಸಿದ್ದೇನೆ. ನೂರಾರು ಜನರಿಗೆ ಪಕ್ಷದ ಟಿಕೆಟ್​ ಕೊಡುವ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್​ ನೀಡಬಾರದು ಎನ್ನುವುದಕ್ಕೆ ಕಾರಣ ಏನು? ಎಂದು ವರಿಷ್ಠರಿಗೆ ಮರು ಪ್ರಶ್ನೆ ಹಾಕಿದ್ದರು. ಸಮೀಕ್ಷೆ ಧನಾತ್ಮಕವಾಗಿದೆ. ನನ್ನ ಮೇಲೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲ. ಪಕ್ಷಕ್ಕಾಗಿ ದುಡಿದಿರುವುದನ್ನು ವರಿಷ್ಠರಿಗೆ ಹೇಳಿದ್ದೇನೆ ಎಂದು ಜಗದೀಶ ಶೆಟ್ಟರ್​ ಹೇಳಿದ್ದರು.

    ಇದನ್ನೂ ಓದಿ: ಗೌರವಯುತವಾಗಿ ಹೊರ ಹೋಗಬೇಕು ಈ ರೀತಿ ಹೋಗುವುದು ಸರಿಯಲ್ಲ: ಜಗದೀಶ್​ ಶೆಟ್ಟರ್ ಬೇಸರ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts