More

    5 ಕ್ಷೇತ್ರಗಳ ಟಿಕೆಟ್ ಘೋಷಿಸಿ ಉಳಿದೆರಡರ ಕುತೂಹಲ ಕಾಯ್ದಿರಿಸಿದ ಬಿಜೆಪಿ!

    ಹಾಸನ : ಅಳೆದು ತೂಗಿ, ಹತ್ತಾರು ಲೆಕ್ಕಾಚಾರ ಮಾಡಿ ಕೊನೆಗೂ ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ರಾತ್ರಿ ಪ್ರಕಟಿಸಿದೆ. ಹಾಸನದಲ್ಲಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿ, ಉಳಿದ ಎರಡು ಕ್ಷೇತ್ರಗಳ ಟಿಕೆಟ್ ಘೋಷಣೆ ಕುತೂಹಲವನ್ನು ಹಾಗೆ ಉಳಿಸಿಕೊಂಡಿದೆ.
    ಹಾಸನದಿಂದ ಹಾಲಿ ಶಾಸಕ ಪ್ರೀತಂ ಜೆ ಗೌಡ, ಸಕಲೇಶಪುರದಿಂದ ಸ್ಥಳೀಯ ಸಿಮೆಂಟ್ ಮಂಜು, ಬೇಲೂರಿನಿಂದ ಎಚ್.ಕೆ. ಸುರೇಶ್, ಹೊಳೆನರಸೀಪುರದಿಂದ ದೇವರಾಜೇಗೌಡ ಹಾಗೂ ಅರಕಲಗೂಡಿನಿಂದ ಯೋಗಾ ರಮೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಉಳಿದ ಸಕಲೇಶಪುರ ಹಾಗೂ ಚನ್ನರಾಯಪಟ್ಟಣ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
    ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ಗಾಗಿ ಅಂತಹ ಪ್ರಬಲ ಪೈಪೋಟಿ ಏನಿರಲಿಲ್ಲ. ಬೇಲೂರು ಹಾಗೂ ಸಕಲೇಶಪುರದಲ್ಲಿ ಮಾತ್ರ ಆಕಾಂಕ್ಷಿಗಳು ಹೆಚ್ಚಿದ್ದರು. ಉಳಿದಂತೆ ಹಾಸನದಲ್ಲಿ ಹಾಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ. ಆದರೆ, ಇವರ ವಿರುದ್ಧ ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಈಗಲೂ ನಿಗೂಢವಾಗಿದೆ.
    ಅರಕಲಗೂಡು ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಯೋಗಾ ರಮೇಶ್ ಈ ಬಾರಿಯೂ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ತೊರೆದು ಈಗಷ್ಟೇ ಬಿಜೆಪಿ ಸೇರಿದ್ದ ಹಾಲಿ ಶಾಸಕರಾಗಿದ್ದ ಎಟಿ ರಾಮಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ‘ನಾನು ಟಿಕೆಟ್ ಆಕಾಂಕ್ಷಿಯಲ್ಲ. ನಾನೇ ಸ್ವಯಂಕೃತವಾಗಿ ಟಿಕೆಟ್ ನೀಡದಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೆ. ಈಗ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಅಷ್ಟೇ ನಮ್ಮ ಮುಂದಿನ ಕೆಲಸ,’ ಎಂದು ಸ್ವತಃ ಎಟಿ ರಾಮಸ್ವಾಮಿ ಅವರೇ ಹೇಳಿರುವುದರಿಂದ ಇಲ್ಲಿ ಬಂಡಾಯದ ಪ್ರಶ್ನೆ ಬರುವುದಿಲ್ಲ. ಆದರೆ, ಬಿಜೆಪಿ ಅಸ್ತಿತ್ವವೇ ಇಲ್ಲದ ಈ ಕ್ಷೇತ್ರದಲ್ಲಿ ಯೋಗಾ ರಮೇಶ್ ಅವರಿಗೆ ಈ ಬಾರಿ ಗೆಲ್ಲುವ ಯೋಗ ಕೂಡಿಬರಲಿದೆಯೇ ಎಂಬುದನ್ನು ಕಾದುನೋಡಬೇಕು. ಇನ್ನು ಹೊಳೆನರಸೀಪುರದಲ್ಲಿ ಕೂಡ ಬಿಜೆಪಿಯದು ಇದೇ ಪರಿಸ್ಥಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts