More

    ಮೂಗಿಗೆ ಮೊಳೆ ಹೊಡೆದುಕೊಂಡ, ಕುತ್ತಿಗೆಗೆ ಹಾಕಿದ್ದ ಉರುಲು ತಪ್ಪಿಸಿಕೊಂಡ! ವಿನೂತನ ಪ್ರಚಾರಕ್ಕಿಳಿದ ಸ್ವಯಂ ಘೋಷಿತ ಪಕ್ಷದ ಅಭ್ಯರ್ಥಿ

    ವಿಜಯಪುರ: ವಿಧಾನ ಸಭೆ ಚುನಾವಣೆ ಕಾವು ರಂಗೇರಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಏತನ್ಮಧ್ಯೆ ಇಲ್ಲೊಬ್ಬ ಸ್ವಯಂ ಘೋಷಿತ ಪಕ್ಷದ ಅಭ್ಯರ್ಥಿ ಪವಾಡ ಬಯಲು ಮಾಡುವ ಮೂಲಕ ವಿನೂತನವಾಗಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾನೆ!

    ಇದನ್ನೂ ಓದಿ: ಸಾಧಕರ ದಾರಿ | ರಂಗಸ್ಥಳದಲ್ಲಿ ಇವರ ಅಭಿನಯ ಕಂಡು ಡಾ.ರಾಜ್​ ಕುಮಾರ್ ಸ್ಫೂರ್ತಿ ಪಡೆದಿದ್ದರು!

    ರಾಷ್ಟ್ರೀಯ ಬಸವಾದಿ ಲಿಂಗಾಯತ ಪಕ್ಷದ ಅಭ್ಯರ್ಥಿ ಎಂದು ಹೇಳಿಕೊಂಡು ವಿಜಯಪುರ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ವಾಗ್ದಾನ ಮಾಡಿದ ಕೆ.ಆರ್. ಕಡೇಚೂರ ಮತದಾರರನ್ನು ಸೆಳೆಯಲು ಅಸನುರಿಸಿದ ಮಾರ್ಗ ವಿನೂತನ, ವಿಶಿಷ್ಟ. ಐದು ಇಂಚಿನ ಮೊಳೆ ಮೂಗಿನಲ್ಲಿ ಹೊಡೆದುಕೊಳ್ಳುವ ಮೂಲಕ ಹಾಗೂ ಉದ್ದನೆಯ ಹಗ್ಗದಿಂದ ಕುತ್ತಿಗೆಗೆ ಬಿಗಿದುಕೊಂಡ ಉರುಳಿನಿಂದ ಪಾರಾಗುವ ಮೂಲಕ ಪವಾಡ ಬಯಲು ಮಾಡಿ ಮತದಾರರ ಗಮನ ಸೆಳೆಯುತ್ತಿದ್ದಾರೆ.

    ಇದನ್ನೂ ಓದಿ: ‘ಮಡಕೆ’ ಬಿಬಿಕೆಪಿ ಪಕ್ಷದ ಚಿಹ್ನೆ

    ಮೂಲತಃ ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ಸಂಸ್ಥಾಪಕರಾದ ಕಡೇಚೂರ ಶರಣರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಶರಣರ ನೈಜ ಆಶಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಮೂಢ ನಂಬಿಕೆಗಳ ವಿರುದ್ಧ ಸಮರ ಸಾರಿರುವ ಇವರು ಒಂದಿಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕಿಳಿಯುವುದಾಗಿಯೂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts