More

    ಟೋಕಿಯೋ ಒಲಿಂಪಿಕ್ಸ್: 100 ಮೀ. ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಜಮೈಕಾ ಓಟಗಾರ್ತಿ

    ಟೋಕಿಯೋ: 2020 ಟೋಕಿಯೋ ಒಲಿಂಪಿಕ್ಸ್​​ನ ಮಹಿಳೆಯರ 100 ಮೀ. ಓಟದಲ್ಲಿ ಜಮೈಕಾ ದೇಶದ ಎಲೈನ್ ಥೋಮ್​ಪ್ಸ​ನ್ ಹೆರಾ ಮೊದಲ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.

    ಇಂದು ನಡೆದ ಮಹಿಳೆಯರ 100 ಮೀ. ಓಟದಲ್ಲಿ 10.61 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದು ಒಲಿಂಪಿಕ್ಸ್​​ ಇತಿಹಾಸದಲ್ಲೇ 2ನೇ ಅತಿ ವೇಗದ ಓಟ ಎಂಬ ದಾಖಲೆಗೆ ಪಾತ್ರವಾಗಿದೆ. ಹೆರಾ 2016 ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​​ನಲ್ಲೂ ಚಿನ್ನದ ಪದಕ ಪಡೆದಿದ್ದರು.

    ಇದನ್ನು ಓದಿ: ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್‌ಗೇರಿದ ಭಾರತದ ಮಹಿಳಾ ಹಾಕಿ ತಂಡ

    ಮಹಿಳೆಯರ 100 ಮೀ. ಓಟದಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದಿರುವ ಶೆಲ್ಲಿಯನ್ 10.74 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ್ಕೆ ತೃಪ್ತಿಪಟ್ಟಿದ್ದಾರೆ.
    1988ರ ಸಿಯೋಲ್ ಒಲಿಂಪಿಕ್ಸ್​​ನಲ್ಲಿ 10.49 ಸೆಕೆಂಡ್​​ಗಳಲ್ಲಿ 100 ಮೀ. ಓಟ ಪೂರ್ಣಗೊಳಿಸುವ ಮೂಲಕ ಅಮೇರಿಕಾದ ಫ್ಲೋರೆನ್ಸ್ ಗ್ರಿಫ್ತ್ ಜ್ವೈನರ್ ವಿಶ್ವ ದಾಖಲೆ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts