ಜೋಕೊವಿಕ್‌ಗೆ ಒಲಿಂಪಿಕ್ಸ್‌ನಲ್ಲಿ ನಿರಾಸೆ; ಬರಿಗೈಲಿ ವಾಪಸಾದ ವಿಶ್ವ ನಂ.1

ಟೋಕಿಯೊ: ವಿಶ್ವ ನಂ.1 ನೊವಾಕ್ ಜೋಕೊವಿಕ್ ಟೋಕಿಯೊ ಒಲಿಂಪಿಕ್‌ನ ಟೆನಿಸ್ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಗೋಲ್ಡನ್ ಸ್ಲಾಂ ಸಾಧಿಸುವ ಅಪರೂಪದ ಅವಕಾಶ ತಪ್ಪಿಸಿಕೊಂಡಿದ್ದ ಜೋಕೋ, ಶನಿವಾರ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ 4-6, 7-6, 3-6 ಸೆಟ್‌ಗಳಿಂದ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಸೋಲನುಭವಿಸಿದರು. ಕಳೆದ 24 ಗಂಟೆಗಳಲ್ಲಿ ಜೋಕೋ ಅನುಭವಿಸಿದ 3ನೇ ಸೋಲು ಇದಾಗಿದೆ. ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲೂ ಜೋಕೋ ಸೋಲನುಭವಿಸಿದ್ದರು. … Continue reading ಜೋಕೊವಿಕ್‌ಗೆ ಒಲಿಂಪಿಕ್ಸ್‌ನಲ್ಲಿ ನಿರಾಸೆ; ಬರಿಗೈಲಿ ವಾಪಸಾದ ವಿಶ್ವ ನಂ.1