More

    ಸಂವಿಧಾನದ ಆಶಯಗಳನ್ನು ಅರಿತು ನಡೆಯೋಣ

    ಸಿಂದಗಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಭಾನುವಾರ ಪ್ಲೈಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗಣೇಶ ಕನ್ಸಟ್ರಕ್ಷನ್ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಸಂವಿಧಾನ ಅರಿವಿಗಾಗಿ ಹಮ್ಮಿಕೊಂಡಿದ್ದ ಓಟಕ್ಕೆ ಶಾಸಕ ಅಶೋಕ ಮನಗೂಳಿ ಅವರು ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ದೇಶದ ಏಕತೆಗೆ ರಾಷ್ಟ್ರೀಯತೆಗೆ ಧಕ್ಕೆಯಾಗದಂತೆ ದೇಶವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸದೃಢಗೊಳಿಸುವ ಆಶಯದೊಂದಿಗೆ ನೀಡಿರುವ ಸಂವಿಧಾನವನ್ನು ನಾವೆಲ್ಲರೂ ಅರಿತು ಅದನ್ನು ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.

    ಕಸಾಪ ಮಾಜಿ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿದರು. ತಾಲೂಕಾಡಳಿತದಿಂದ ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಸಂವಿಧಾನದ ಪೀಠಿಕೆ ಪ್ರಸ್ತಾವನೆ ಓದಿದರು.

    ಓಟದಲ್ಲಿ ಪಾಲ್ಗೊಂಡಿದ್ದ ಎಲ್ಲ ಯುವಕ ಹಾಗೂ ಯುವತಿಯರಿಗೆ ಗುತ್ತಿಗೆದಾರ ವೆಂಕಟೇಶ ಗುತ್ತೇದಾರ ಅವರು ಸಮವಸ್ತ್ರ ವಿತರಿಸಿದರು. ಡಾ. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಮ್ಯಾರಾಥಾನ್‌ನಲ್ಲಿ ಯುವತಿಯರು, ಯುವಕರು ಪಾಲ್ಗೊಂಡು ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಕನಕದಾಸ ವೃತ್ತ, ಮೋರಟಗಿ ರಸ್ತೆ, ಟಿಪ್ಪು ವೃತ್ತದಿಂದ ಮಹಾತ್ಮಾಗಾಂಧಿ ವೃತ್ತದ ಮುಖಾಂತರ ಅಂಬೇಡ್ಕರ ವೃತ್ತದವರೆಗಿನ 5ಕಿಮೀ ಓಟವನ್ನು ಕ್ರಮಿಸಿದರು.

    ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಐಶ್ವರ್ಯ ಬಿಜ್ಜರಗಿ ಅವರಿಗೆ ಮುಖಂಡ ರಮೇಶ ಹೂಗಾರ ಅವರು 10 ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ಅಶ್ವಿನಿ ಹುಗುಂಟಿ ಅವರಿಗೆ ಸಮಾಜಕಲ್ಯಾಣಾಧಿಕಾರಿ ಎನ್.ಎಸ್. ಭೂಸಗೊಂಡ ಅವರು 5 ಸಾವಿರ ನಗದನ್ನು ನೀಡಿ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿದರು.

    ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೃಷ್ಣ ರಾಠೋಡ ಅವರಿಗೆ ಗುತ್ತಿಗೆದಾರ ಎಂ.ಎಂ. ಮುಂಡೇವಾಡಗಿ ಅವರು 25 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ಅಮೀರ್ ಕೋತವಾಲ್ ಅವರಿಗೆ ಅನಂತ ದೇವರಡ್ಡಿ ಅವರು 11ಸಾವಿರ ನಗದು ನೀಡಿ ಗೌರವಿಸಿದರು.
    ಪರಶುರಾಮ ಕೂಚಬಾಳ, ಶಮ್ಮು ಮಂದ್ರೂಪ, ಪ್ರವೀಣ ಹೊಸಮನಿ, ನಿಂಗರಾಜ ಗುಡಿಮನಿ, ಮುತ್ತು ತಳ್ಳೊಳ್ಳಿ, ರಮೇಶ ನಡುವಿನಕೇರಿ, ಸಿದ್ದು ಮ್ಯಾಕೇರಿ, ಬಾಲಕೃಷ್ಣ ಛಲವಾದಿ, ದಸ್ತಗೀರ ಆಳಂದ, ಶ್ರೀಮಂತ ಚೌರ, ಶಿವಾನಂದ ಆಲಮೇಲ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts