More

  ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ರು ಜೇಮ್ಸ್ ನಿರ್ಮಾಪಕ..

  ವಿಜಯನಗರ: ಪವರ್​​ಸ್ಟಾರ್​ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ ಜೇಮ್ಸ್​ನ ನಿರ್ದೇಶಕ-ನಿರ್ಮಾಪಕ ಇಬ್ಬರೂ ನಿನ್ನೆ ಬಹಳ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಒಂದು ಬೇಸರದ ಸಂಗತಿ. ಜೇಮ್ಸ್​ ಸಿನಿಮಾವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಹಿನ್ನೆಯಲ್ಲಿ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

  ಜೇಮ್ಸ್​ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇಂದು ಕೂಡ ಸುದ್ದಿಯಲ್ಲಿದ್ದು ಮತ್ತೊಂದು ಬೇಸರದ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ, ಆ ಕುರಿತು ಅವರು ಕ್ಷಮೆ ಕೋರಿದ್ದಲ್ಲದೆ, ಅದರ ಬೆನ್ನಿಗೇ ಒಂದು ಸಂತೋಷದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

  ಇಂದು ಹೊಸಪೇಟೆಗೆ ಭೇಟಿ ನೀಡಿದ ಅವರು ಅಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಜೇಮ್ಸ್​ ಪ್ರಿರಿಲೀಸ್​ ಇವೆಂಟ್​ ಹೊಸಪೇಟೆಯಲ್ಲೇ ಮಾಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮಾಡಲಾಗಿಲ್ಲ. ಅದಕ್ಕಾಗಿ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.

  ಇದನ್ನೂ ಓದಿ: ನಿಶ್ಚಿತಾರ್ಥಕ್ಕೆ ಹಾಲ್​ ಬುಕ್ ಮಾಡಿ ಬರುತ್ತಿದ್ದಾಗ ಭಾರಿ ಸ್ಫೋಟ; ಜೀವನ್ಮರಣ ಹೋರಾಟದಲ್ಲಿ ಅಪ್ಪ-ಮಗಳು

  ಆದರೆ ಸಕ್ಸಸ್​ ಪ್ರೋಗ್ರಾಂ ಹೊಸಪೇಟೆಯಲ್ಲೇ ಮಾಡುತ್ತೇವೆ. ಆ ಬಗ್ಗೆ ಪ್ರಿರಿಲೀಸ್​ ಇವೆಂಟ್​​ನಲ್ಲಿ ಶಿವಣ್ಣ ಅವರೇ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಯಶಸ್ಸನ್ನು ಇಲ್ಲೇ ಹೊಸಪೇಟೆಯಲ್ಲೇ ಆಚರಿಸುತ್ತೇವೆ ಎಂದು ಜೇಮ್ಸ್ ನಿರ್ಮಾಪಕರು ಭರವಸೆ ನೀಡಿದರು.

  ನಮ್ಮದೇ ಮೊದಲ ‘ದಸರಾ’ ಎಂದ ಶರ್ಮಿಳಾ; ತೆಲುಗು ನಿರ್ಮಾಪಕರ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು..

  ಜೇಮ್ಸ್​ಗೂ ಎತ್ತಂಗಡಿ ಆತಂಕ; ‘ದಯವಿಟ್ಟು ಸಹಕರಿಸಿ’ ಎಂದು ನಿರ್ದೇಶಕರ ಮನವಿ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts